ಬಂಟ್ವಾಳ: ಇಲ್ಲಿನ ಕಡೇಶ್ವಾಲ್ಯ ಸಮೀಪದ ನೆಕ್ಕಿಲಾಡಿ ನಿವಾಸಿ, ಯುವ ದೇಹದಾರ್ಢ್ಯ ಪಟು ನವೀನ್ ನಾಯ್ಕ್ ಇವರು ಉಡುಪಿ ಮತ್ತು ಶಿವಮೊಗ್ಗದಲ್ಲಿ ನಡೆದ ೬೫ ಕೆ.ಜಿ.ವಿಭಾಗದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದು ಗಮನ ಸೆಳೆದಿದ್ದಾರೆ. ಕಡೆಶ್ವಾಲ್ಯ ಸಮೀಪದ ನೆಕ್ಕಿಲಾಡಿ ನಿವಾಸಿ ಹರೀಶ ನಾಯ್ಕ್ ಮತ್ತು ಗಿರಿಜಾ ನಾಯ್ಕ್ ದಂಪತಿ ಪುತ್ರನಾಗಿರುವ ನವೀನ್ ಇವರಿಗೆ ಕೃಷ್ಣ ಅಂಚನ್ ಮಾರ್ಗದರ್ಶನ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕಡೇಶ್ವಾಲ್ಯ: ದೇಹದಾರ್ಢ್ಯ ಸ್ಪರ್ಧೆ ನವೀನ್ ನಾಯ್ಕ್ ಪ್ರಥಮ
RELATED ARTICLES