ಉಡುಪಿ : ಕಕ್ಕುಂಜೆ ಕಟ್ಟೆ ಮಹಾದೇವಿ ಅಮ್ಮನವರ ದೇವಸ್ಥಾನ ಹಾಗೂ ಕುಕ್ಕಿಕಟ್ಟೆ ಕುದ್ರುಚಾವಡಿ ಪಂಚಧೂಮಾವತಿ ಗಡುವಾಡು ದೈವಸ್ಥಾನ ಜೀರ್ಣೋದ್ಧಾರಗೊಂಡಿದ್ದು ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ದೇಗುಲದ ಪ್ರಧಾನ ಅರ್ಚಕ ವಾಸುದೇವ ಆರ್. ನಾಯಕ್ ಅವರ ಪೌರೋಹಿತ್ಯದಲ್ಲಿ ಶುಕ್ರವಾರ ಚಪ್ಪರ ಮುಹೂರ್ತ ನೆರವೇರಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತಾರಾನಾಥ ಪೂಜಾರಿ, ಉಪಾಧ್ಯಕ್ಷರಾದ ರವೀಂದ್ರನಾಥ ಶೆಟ್ಟಿ ಉದಯ ಸುವರ್ಣ, ಪ್ರವೀಣ್ ದೇವಾಡಿಗ, ಸುನಿಲ್ ಶೆಟ್ಟಿ ದಿನೇಶ್ ಕುಂದರ್, ಕಾರ್ಯದರ್ಶಿ ಸುರೇಶ್ ಸುವರ್ಣ, ಕೋಶಾಧಿಕಾರಿ ಭಾಸ್ಕರ್ ಸುವರ್ಣ, ಗಣೇಶ್ ಪೂಜಾರಿ, ಮೊಕ್ತೇಸರ ಕೆ. ಶ್ರೀಕಾಂತ್ ಶೆಟ್ಟಿ ನಗರಸಭೆ ಸದಸ್ಯರಾದ ಡಿ. ಬಾಲಕೃಷ್ಣ ಶೆಟ್ಟಿ ಅಶೋಕ ಪೂಜಾರಿ, ದೇವಸ್ಥಾನ ಮತ್ತು ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಊರ ಹತ್ತು ಸಮಸ್ಥರು ಉಪಸ್ಥಿತರಿದ್ದರು.