ಮುಲ್ಕಿ : ಕಲಾ ಸಂಭ್ರಮ ಸೂರಿಂಜೆ ಇದರ ವತಿಯಿಂದ ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಕೃಷ್ಣ ವೇಷ ಸ್ಪರ್ದೆ ನಡೆಯಿತು ದೇವಸ್ಥಾನದ ಅರ್ಚಕರಾದ ಶ್ರೀನಿವಾಸ್ ಅಸ್ರಣ್ಣ ಚಾಲನೆ ನೀಡಿದರು ವೇದಿಕೆಯಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಡಾ. ಪದ್ಮನಾಭ ಭಟ್ ಎಕ್ಕಾರ್,ಪೊನ್ನಗಿರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುಕೇಶ್ ಶೆಟ್ಟಿ, ಹಿಂಧು ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ಅಧ್ಯಕ್ಷ ಜಯಪ್ರಕಾಶ್ ಸೂರಿಂಜೆ, ಕಾಟಿಪಳ್ಳ ಕೇಶವ ಶಿಶು ಮಂದಿರದ ಕಟ್ಟಡ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಶೇಖರ್ ಪೂಜಾರಿ,ಪುನೀತ್ ಪೊರಿಕಾನ,ಸೂರಿಂಜೆ ಗ್ರಾಮ ಪಂಚಾಯತ್ ಸದಸ್ಯ ದಿವಾಕರ ಶೆಟ್ಟಿ, ವಸುಧಾ ಅನಿಲ್ ಶೆಟ್ಟಿ ತೇವು ಸೂರಿಂಜೆ, ಪಾರ್ವತಿ ಕೋಟೆ, ಸವಿತಾ ನಾಗರಾಜ್ ಕೆಮ್ಮಣ್ಣು, ಜ್ಯೋತಿ ಶೆಟ್ಟಿ ಪೊನ್ನಗಿರಿ, ರೇಖಾ ಜಯಾನಂದ ಪೊನ್ನಗಿರಿ, ಶೈಲಜಾ ಮಧ್ಯ ದೇವಸ್ಥಾನ ಬಳಿ,ಪ್ರದೀಪ್ ಶೆಟ್ಟಿ ಸೂರಿಂಜೆ, ರಾಧಕೃಷ್ಣ ಭಂಡಾರ್ಕರ್, ರಾಜೇಶ್ ಶೆಟ್ಟಿ ಗೋಣಮಜಲು, ವಿಘ್ನೇಶ್ ಸೂರಿಂಜೆ ಮುಂತಾದವರು ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊನ್ನಗಿರಿ ಸೇವಾ ವೃಂದದ ಜಗನ್ನಾಥ ಶೆಟ್ಟಿ ಸೂರಿಂಜೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಭೂಸೇನೆಯ ಸೇನಾನಿ ಬ್ರಿಜೇಶ್ ಸೂರಿಂಜೆ ಮತ್ತು ಸಮಾಜ ಸೇವೆಗಾಗಿ ಕೇಸರಿ ಸೂರಿಂಜೆ ಬಳಗದ ಮಧುರಾಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು ಒಟ್ಟು 125 ಸ್ಪರ್ದಿಗಳು ಭಾಗವಹಿಸಿದ್ದರು.