ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ “ಕನ್ನಡ ರಾಜ್ಯೋತ್ಸವ”ದ ಪ್ರಯುಕ್ತ ಕನ್ನಡ ನಾಡು, ನುಡಿಯ ಕುರಿತು ರಾಜ್ಯ ಮಟ್ಟದ ಉಚಿತ ಲಿಖಿತ ಪ್ರಬಂಧ ಸ್ಪರ್ಧೆ ಹಮ್ಮಿಕೊಂಡಿದ್ದು ಫಲಿತಾಂಶ ಈ ಕೆಳಗಿನಂತಿದೆ ಎಂದು ತೀರ್ಪುಗಾರರಲ್ಲಿ ಒಬ್ಬರಾದ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ತಿಳಿಸಿದ್ದಾರೆ.
ಪ್ರಥಮ ಬಹುಮಾನ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವನಿತಾ ಹೆಗಡೆ, ದ್ವಿತೀಯ ಬಹುಮಾನ ಮೈಸೂರಿನ ಮೋಹನ್ ಮುತ್ತು, ತೃತೀಯ ಬಹುಮಾನ ದಾವಣಗೆರೆಯ ನಾಗರತ್ನ ಕೆ.ಬಿ. ಸಮಾಧಾನಕರ ಬಹುಮಾನಗಳು ದಾವಣಗೆರೆಯ ಕುಸುಮಾ ಲೋಕೇಶ್, ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೀವಳ್ಳಿ ಸಾಂತಗಲ್‌ನ
ವಿನಾಯಕ ರಮೇಶ್ ನಾಯಕ ಪಡೆದಿರುತ್ತಾರೆ ಎಂದು ತೀರ್ಪುಗಾರರಾದ ಶ್ರೀಮತಿ ಮಂಜುಳಾ ಪ್ರಸಾದ್ ಬಂಗೇರ
ಪ್ರಕಟಿಸಿದ್ದಾರೆ.
ಸ್ಪರ್ಧೆಯ ನಿಯಮದಂತೆ ಯಾವುದೇ ಸಭೆ ಸಮಾರಂಭ ಇಲ್ಲದೇ ಬಹುಮಾನ ವಿಜೇರಿಗೆ ಮಾತ್ರ ಸ್ಪರ್ಧೆಯ ನಂತರ ಫಲಿತಾಂಶ, ಅಭಿನಂದನಾ ಪತ್ರವನ್ನು ಸ್ಪರ್ಧಿಗಳು ಕೊಟ್ಟ ವ್ಯಾಟ್ಸಪ್ ಸಂಖ್ಯೆಗೆ ಕಳಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ವ್ಯಕ್ತಪಡಿಸಿದ್ದಾರೆ.