ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಪ್ರತೀ ವರ್ಷದಂತೆ ಈ ವರ್ಷವೂ ಯುಗಾದಿ ಹಬ್ಬದ ಪ್ರಯುಕ್ತ ಯುಗಾದಿ ಕುರಿತು ರಾಜ್ಯ ಮಟ್ಟದ ಉಚಿತ ಲಿಖಿತ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಫಲಿತಾಂಶ ಈ ಕೆಳಗಿನಂತಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ತಿಳಿಸಿದ್ದಾರೆ. ಪ್ರಥಮ ಬಹುಮಾನ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಶಕುಂತಲ ಯು. ದ್ವಿತೀಯ ಬಹುಮಾನ ಬೆಂಗಳೂರಿನ ಅಂಜಲಿ ಗರಗ, ತೃತೀಯ ಬಹುಮಾನ ದಾವಣಗೆರೆ ಜಿಲ್ಲೆಯ ನ್ಯಾಮತಿಯ ಕವಿತಾ ವೀರೇಶ್ ಎನ್.ಆರ್. ಪ್ರೋತ್ಸಾಹಕರ ಬಹುಮಾನ ದಾವಣಗೆರೆಯ ಹೆಚ್.ಎಸ್.ಪುಷ್ಪಾ ಮಂಜುನಾಥ್ ಮೆಚ್ಚುಗೆ ಬಹುಮಾನಗಳನ್ನು ದಾವಣಗೆರೆಯ ಬಾಲಪ್ರತಿಭೆಗಳಾದ ದಿನಕರ್ ಎಸ್.ಪಿ., ಲಾವಣ್ಯ ಎಸ್.ಪಿ., ಶ್ರಾವಣಿ ಎಸ್.ಪಿ. ಪಡೆದಿರುತ್ತಾರೆ ಎಂದು ತೀರ್ಪುಗಾರರಾದ ಕಲಾಕುಂಚ ಬೆಂಗಳೂರು ಪ್ರತಿನಿಧಿ ರೇಖಾ ಪುರಾಣಿಕ್ ತಿಳಿಸಿದ್ದಾರೆ. ಸ್ಪರ್ಧೆಯ ನಿಯಮದಂತೆ ಯಾವುದೇ ಸಭೆ-ಸಮಾರಂಭವಿಲ್ಲದೇ ಸ್ಪರ್ಧಿಗಳು ಕೊಟ್ಟ ವ್ಯಾಟ್ಸಪ್ ಸಂಖ್ಯೆಗೆ ಬಹುಮಾನ ವಿಜೇತರಿಗೆ ಮಾತ್ರ ಸ್ಪರ್ಧೆಯ ಫಲಿತಾಂಶ ಹಾಗೂ ಅಭಿನಂದನಾ ಪತ್ರ ಕಳಿಸಲಾಗುವುದು ಕಲಾಕುಂಚದ ಸರ್ವ ಸದಸ್ಯರು, ಪದಾಧಿಕಾರಿಗಳ ಪರವಾಗಿ ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ಬಹುಮಾನ ವಿಜೇತರೆಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.