Monday, July 15, 2024
Homeಧಾರ್ಮಿಕಕಳತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಮೇ9 ರವರೆಗೆ ಜಾತ್ರಾ ಮಹೋತ್ಸವ

ಕಳತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಮೇ9 ರವರೆಗೆ ಜಾತ್ರಾ ಮಹೋತ್ಸವ

ಕಾಪು : ಕುತ್ಯಾರು – ಪಾದೂರು – ಕಳತ್ತೂರು ಗ್ರಾಮಾಧಿ ಪತಿ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಶ್ರೀ ಕ್ಷೇತ್ರದ ಪ್ರಧಾನ ತಂತ್ರಿ ಮತ್ತು ಆಡಳಿತ ಮೊಕೇಸರ ವೇ। ಮೂ। ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ। ಮೂ। ಉದಯ ತಂತ್ರಿಗಳ ಸಹಕಾರದೊಂದಿಗೆ ಮೇ 1 ರಿಂದ ಮೊದಲ್ಗೊಂಡು ಮೇ 9ರವರೆಗೆ ನಡೆಯಲಿದೆ. ಮೇ 1ರಿಂದ 4ರವರೆಗೆ ಪ್ರತೀ ದಿನ ಪ್ರತೀ ದಿನ ಹೂವಿನ ಪೂಜೆ, ಬೈಗಿನ ಬಲಿ, ಮೇ 5ರಂದು ಹೂವಿನ ಪೂಜೆ, ಬೈಗಿನ ಬಲಿ, ಅಂಕುರಾರೋಹಣ, ಪ್ರಾಸಾದ ಶುದ್ದಿ, ಶ್ರೀಮಹಾರಂಗ ಪೂಜೆ, ಭೂತ ಬಲಿ, ಮೇ 6ರಂದು ಬೆಳಗ್ಗೆ 11ಕ್ಕೆ ಧ್ವಜಾರೋಹಣ, ಶತ ರುದ್ರಾಭಿಷೇಕ, ನವಕ ಕಲಶ ಪ್ರಧಾನ ಯಾಗ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಹೂವಿನ ಪೂಜೆ, ನೃತ್ಯ ಬಲಿ, ಉದಯಾತ್‌ಪೂರ್ವ 4ರಿಂದ ಆಯನ ಬಲಿ ನಡೆಯಲಿದೆ. ಮೇ 8ರಂದು ಪ್ರಾಥಃ ಶತರುದ್ರಾಭಿಷೇಕ, ನವಕ ಕವಶ, ಪ್ರದಾನ ಯಾಗ, ಕಲಶಾಭಿಷೇಕ, ರಥಾಧಿವಾಸ ಹೋಮ, ಮಹಾಪೂಜೆ, ಭಜನಾ ಸಂಕೀರ್ತನೆ, ಪಲ್ಲಪೂಜೆ, ರಥ ಸಂಪ್ರೋಕ್ಷಣೆ, 11ಕ್ಕೆ ರಥಾರೋಹಣ, ರ ಮಹಾಅನ್ನಸಂತರ್ಪಣೆ, ರಾತ್ರಿ 7.30ಕ್ಕೆ ಶ್ರೀ ಮನ್ಮಹಾರಥೋತ್ಸವ, ಕಳತ್ತೂರು ಬೆಡಿ (ಸುಡುಮದ್ದು ಪ್ರದರ್ಶನ), ನೃತ್ಯ ಬಲಿ, ರಂಗಪೂಜೆ, ಶ್ರೀ ಭೂತಬಲಿ, ಶೈಯ್ಯಾಸನ ಕವಾಟ ಬಂಧನ ನಡೆಯಲಿದೆ. ಮೇ 9ರಂದು ಪ್ರಾತಃ ಕವಾಟೋದ್ಘಾಟನೆ, ತುಲಾಭಾರ, ಅವಕೃತ ಸ್ನಾನ, ನೃತ್ಯಬಲಿ, ಧ್ವಜಾರೋಹಣ, ಮಹಾಮಂತ್ರಾಕ್ಷತೆ, ಸಂಪ್ರೋಕ್ಷಣೆ ನಡೆಯಲಿದೆ. ಕಲ್ಕುಡ ದೈವದ ಸನ್ನಿಧಿಯಲ್ಲಿ ಬೆಳಗ್ಗೆ 9ರಿಂದ ಕಲಶಾಭಿಷೇಕ, ಸಾಯಂ. 5ರಿಂದ ದೈವಕ್ಕೆ ಪ್ರಸನ್ನ ಪೂಜೆ, ಭಂಡಾರ ಇಳಿಯುವುದು, 7.30ಕ್ಕೆ ಅನ್ನಸಂತರ್ಪಣೆ. ರಾತ್ರಿ 8.30ರಿಂದ 12ರ ತನಕ ಶ್ರೀ ಕಲ್ಕುಡ ದೈವದ ವೈಭವದ ಗಗ್ಗರ ಸೇವೆ, ಹಾಲಾವಳಿ, ಪ್ರಸಾದ ವಿತರಣೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.

RELATED ARTICLES
- Advertisment -
Google search engine

Most Popular