Monday, July 15, 2024
HomeUncategorizedಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕುಂಭಾಭಿಷೇಕ, ನಾಗಬ್ರಹ್ಮಮಂಡಲ: ವಿಜ್ಞಾಪನ ಪತ್ರ ಬಿಡುಗಡೆ

ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕುಂಭಾಭಿಷೇಕ, ನಾಗಬ್ರಹ್ಮಮಂಡಲ: ವಿಜ್ಞಾಪನ ಪತ್ರ ಬಿಡುಗಡೆ

ಕಾಪು: ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪರಿವಾರ ಸಾನ್ನಿಧ್ಯ ಶ್ರೀ ಮಹಾಗಣಪತಿ ದೇವರ ನೂತನ ಗರ್ಭಗೃಹಸಮರ್ಪಣೆ, ಶ್ರೀಮಹಾಲಿಂಗೇಶ್ವರ ದೇವರ ಅಷ್ಟಬಂಧ ಸಹಸ್ರ ಕಲಶ ಸಹಿತ ಬ್ರಹ್ಮಕುಂಭಾಭಿಷೇಕ, ಏಕಪವಿತ್ರ ಶ್ರೀ ನಾಗಬ್ರಹ್ಮಮಂಡಲೋತ್ಸವ ಇತ್ಯಾದಿ ಕಾರ್ಯಕ್ರಮಗಳ ವಿಜ್ಞಾಪನ ಪತ್ರವನ್ನು ಮಾ. 17ರಂದು ಬಿಡುಗಡೆಗೊಳಿಸಲಾಯಿತು.

ದೇಗುಲದ ಆಡಳಿತ ಮೊಕ್ತೇಸರ, ಪ್ರಧಾನ ತಂತ್ರಿ ವೇ। ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ, ಶ್ರೀಕ್ಷೇತ್ರದಲ್ಲಿ ಎ. 25 ರಿಂದ ಮೊದಲ್ಗೊಂಡು ಮೇ 9ರ ವರೆಗೆ ಬ್ರಹ್ಮಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮ ಜರಗಲಿವೆ. ಎ. 28ರಂದು ಮಹಾಗಣಪತಿ ಬಿಂಬ ಪ್ರತಿಷ್ಠೆ ಮೇ 1ರಂದು ಮಹಾಗಣಪತಿ ದೇವರಿಗೆ 501 ಕಲಶೋತ್ಸವ, ಮೇ 2ರಂದು ಶ್ರೀ ಮಹಾಲಿಂಗೇಶ್ವರ ದೇವರಿಗೆ ಸಹಸ್ರ ಕಲಶ ಸಹಿತ ಬ್ರಹ್ಮಕುಂಭಾಭಿಷೇಕ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ಉತ್ಸವ ಬಲಿ ಏಕಪವಿತ್ರ ಶ್ರೀ ನಾಗಬ್ರಹ್ಮಮಂಡಲೋತ್ಸವ, ಮೇ 6ರಂದು ಧ್ವಜಾರೋಹಣ, ಮೇ 8ರಂದು ಶ್ರೀ ಮನ್ಮಹಾರಥೋತ್ಸವ, ಅನ್ನಸಂತರ್ಪಣೆ, ಮೇ 9ರಂದು ಸಂಜೆ ಕಲ್ಕುಡ ದೈವದ ನೇಮ, ಸಂಪ್ರೋಕ್ಷಣೆ ನಡೆಯಲಿದೆ ಎಂದರು.

ಪ್ರಧಾನ ಅರ್ಚಕ ಕಳತ್ತೂರು ಹರೀಶ ತಂತ್ರಿ, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಪೈಯ್ಯಾರು ಶಿವರಾಮ ಶೆಟ್ಟಿ, ಕೋಶಾಧಿಕಾರಿ ಅರುಣಾಕರ ಶೆಟ್ಟಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿಷ್ಣುಮೂರ್ತಿ ಸರಳಾಯ, ರಂಗನಾಥ ಶೆಟ್ಟಿ ಬರೆಬೆಟ್ಟು ರಾಜೇಶ್ ಶೆಟ್ಟಿ ಶಬರಿ, ಪುರುಷೋತ್ತಮ ಶೆಟ್ಟಿಗಾರ್, ಶಾರದೇಶ್ವರಿ ಗುರ್ಮೆ, ಮಮತಾ ತಂತ್ರಿ, ಕಳತ್ತೂರು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಆಚಾರ್ಯ, ಪ್ರಮುಖರಾದ ಯಾದವ ತಂತ್ರಿ, ಕರುಣಾಕರ ತಂತ್ರಿ, ಕೇಶವ ತಂತ್ರಿ, ಪ್ರಕಾಶ್ ತಂತ್ರಿ, ವಸಂತ ಶೆಟ್ಟಿ , ವಳದೂರು ನಾರಾಯಣ ಶೆಟ್ಟಿ ಕೇಂಜ ಬಗ್ಗ ಪೂಜಾರಿ, ಸದಾನಂದ ಶೆಟ್ಟಿ ಕೊರಂಟುಗುತ್ತು, ಪೈಯ್ಯಾರು ಗಣೇಶ್ ಶೆಟ್ಟಿ ನವೀನ್ ಶೆಟ್ಟಿ ಪವನ್ ಶೆಟ್ಟಿ ಅಜಿತ್ ಪೂಜಾರಿ ಕೇಂಜ, ರಾಜೇಶ್ ರಾವ್, ಅಶೋಕ್ ರಾವ್, ಸುಶಾಂತ್ ಶೆಟ್ಟಿ ಪ್ರವೀಣ್ ಗುರ್ಮೆ, ದಿವಾಕರ ಡಿ. ಶೆಟ್ಟಿ ಪ್ರಬಂಧಕ ಕೃಷ್ಣಮೂರ್ತಿ ಭಟ್, ಕುತ್ಯಾರು-ಪಾದೂರು-ಕಳತ್ತೂರು ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular