Saturday, January 18, 2025
Homeಮಂಗಳೂರುಬಂದಾರು: ಪೆರಲ್ದಪಳಿಕೆ ನಿವಾಸಿ ಗೌರಿ ಸುಂದರ ಗೌಡ ಇವರ ನಿವಾಸದಲ್ಲಿ ಕಾಳಿಂಗ ಸರ್ಪ

ಬಂದಾರು: ಪೆರಲ್ದಪಳಿಕೆ ನಿವಾಸಿ ಗೌರಿ ಸುಂದರ ಗೌಡ ಇವರ ನಿವಾಸದಲ್ಲಿ ಕಾಳಿಂಗ ಸರ್ಪ

ಬಂದಾರು :ಡಿ.1 ಬಂದಾರು ಗ್ರಾಮದ ಪೆರಲ್ದಪಳಿಕೆ ನಿವಾಸಿ ಶ್ರೀಮತಿ ಗೌರಿ ಸುಂದರ ಗೌಡ ಇವರ ನಿವಾಸದಲ್ಲಿ ಕಾಳಿಂಗ ಸರ್ಪವೊಂದು ಪ್ರತ್ಯಕ್ಷಗೊಂಡಿದೆ.
ನವೆಂಬರ್ 30 ರಂದು ರಾತ್ರಿ 7 ಗಂಟೆಯ ಸುಮಾರಿಗೆ ಮನೆಯ ಮುಂಭಾಗದಲ್ಲಿ ಸ್ವಚ್ಛ ಗೊಳಿಸುತ್ತಿರುವಾಗ ಹಾವೊಂದು ಗೋಚರಿಸುತ್ತದೆ ಗೌರಿ ಅವರು ಕೇರೆ ಹಾವು ಎಂದು ಭಾವಿಸಿ ತನ್ನ ಮನೆಯ ಅಂಗಳದ ಸ್ವಚ್ಛತೆ ಯನ್ನು ಮುಗಿಸಿ ತಮ್ಮ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ.ಮರುದಿನ ಡಿಸೆಂಬರ್ 1 ರಂದು ಬೆಳಗ್ಗೆ 8 ಗಂಟೆಯ ಸಮಯದಲ್ಲಿ ನೋಡಿದರೂ ಹಾವು ಅದೇ ಸ್ಥಳದಲ್ಲಿರುವುದನ್ನು ಕಂಡು ಭಯಭೀರಾಗಿ ತನ್ನ ಮನೆಯವರಲ್ಲಿ ಹಾಗೂ ನೆರೆ ಹೊರೆಯ ಮನೆಯವರಲ್ಲಿ ಮಾಹಿತಿ ನೀಡಿದರು, ಗಮನಿಸಿದಾಗ ಕಾಳಿಂಗ ಸರ್ಪವೆಂದು ಗೊತ್ತಾಯ್ತು.ತಕ್ಷಣವೇ ಉಪ್ಪಿನಂಗಡಿಯ ನಿವಾಸಿಯಾದ ಸ್ನೇಕ್ ಝಕಾರಿಯ ಇವರನ್ನು ಸಂಪರ್ಕಿಸಲಾಯಿತು ತಕ್ಷಣ ಅವರು ಸ್ಥಳಕ್ಕೆ ಧಾವಿಸಿ ಜಾಣ್ಮೆಯಿಂದ ಹಾವನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿ ಪಡೆದು ಪೆರಿಯಶಾಂತಿ ಬಳಿ ಕಾಡಿಗೆ ಬಿಟ್ಟಿರುವ ಬಗ್ಗೆ ವಾರದಿಯಾಗಿದೆ. ಸ್ನೇಕ್ ಝಕಾರಿಯ ಅವರ ಹೇಳಿಕೆಯ ಪ್ರಕಾರ ಈ ಹಾವು ಸುಮಾರು 9 ಅಡಿ ಉದ್ದವಿದ್ದು ಅಂದಾಜು ಒಂದುವರೆ ವರುಷದ ಹಾವು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು ಸಹಕರಿಸಿದರು.

RELATED ARTICLES
- Advertisment -
Google search engine

Most Popular