Sunday, July 14, 2024
Homeಸಿನಿಮಾಬಹುನಿರೀಕ್ಷಿತ ʻಕಲ್ಕಿ 2898 ಎಡಿʼ ಸಿನೆಮಾ ಬಿಡುಗಡೆ: ಭರ್ಜರಿ ದಾಖಲೆ; ಅಭಿಮಾನಿಗಳ ಸಂಭ್ರಮ

ಬಹುನಿರೀಕ್ಷಿತ ʻಕಲ್ಕಿ 2898 ಎಡಿʼ ಸಿನೆಮಾ ಬಿಡುಗಡೆ: ಭರ್ಜರಿ ದಾಖಲೆ; ಅಭಿಮಾನಿಗಳ ಸಂಭ್ರಮ

ಮುಂಬೈ: ಬಹುನಿರೀಕ್ಷಿತ ಬಾಲಿವುಡ್‌ ಸಿನೆಮಾ ʻಕಲ್ಕಿ 2898 ಎಡಿʼ ಸಿನೆಮಾ ಗುರುವಾರ ದೇಶಾದ್ಯಂತ ತೆರೆಕಂಡಿದೆ. ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಭ್‌ ಬಚ್ಚನ್‌, ಕಮಲ್‌ ಹಾಸನ್‌, ದಿಶಾ ಪಾಟ್ನಿ ನಟಿಸಿರುವ ಈ ಚಿತ್ರ ಭರ್ಜರಿ ದಾಖಲೆಗಳೊಂದಿಗೆ ಓಪನಿಂಗ್‌ ಕಂಡಿದೆ.
ಹೈದರಾಬಾದ್‌ನಲ್ಲಿ ಸಿನೆಮಾ ಪ್ರಿಯರು ಮುಂಜಾನೆ 5 ಗಂಟೆಯಿಂದಲೇ ಥಿಯೇಟರ್‌ ಮುಂದೆ ಜಮಾಯಿಸಿದ್ದರು. ಪ್ರಭಾಸ್‌ ಅಭಿಮಾನಿಗಳು ಚಂಡೆ, ಡೋಲು ಭಾರಿಸಿ ಹೆಜ್ಜೆ ಹಾಕಿದರು. ಸಿನೆಮಾ ತೆರೆಕಂಡ ಮೊದಲ ದಿನವೇ 1 ಮಿಲಿಯನ್‌ಗೂ ಹೆಚ್ಚು ಟಿಕೆಟ್‌ ಮಾರಾಟ ಆಗಿವೆ. ಈವರೆಗೆ ಸಿನೆಮಾ ಬಿಡುಗಡೆಗೂ ಮುನ್ನಾ 37 ಕೋಟಿ ರೂ. ಈ ಸಿನೆಮಾ ಸಂಪಾದಿಸಿದೆ. ಇದು ದಾಖಲೆಯಾಗಿದೆ.
ಹಿಂದಿ, ತಮಿಳು, ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಏಕಕಾಲದಲ್ಲಿ ದೇಶಾದ್ಯಂತ ಸಿನೆಮಾ ತೆರೆಕಂಡಿದೆ. ಸಿನೆಮಾಕ್ಕೆ ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ಲಭ್ಯವಾಗಿದೆ.

RELATED ARTICLES
- Advertisment -
Google search engine

Most Popular