Monday, July 15, 2024
Homeಅಪಘಾತಕಲ್ಲಡ್ಕ : ಕಾರುಗಳ ಅಪಘಾತ: ಬೆನ್ನಟ್ಟಿಕೊಂಡು ಬಂದು ದಂಪತಿಗೆ ಹಲ್ಲೆ

ಕಲ್ಲಡ್ಕ : ಕಾರುಗಳ ಅಪಘಾತ: ಬೆನ್ನಟ್ಟಿಕೊಂಡು ಬಂದು ದಂಪತಿಗೆ ಹಲ್ಲೆ

ಬಂಟ್ವಾಳ: ಕಾರುಗಳ ನಡುವೆ ಸಂಬಂಧಿಸಿದ ಅಪಘಾತಕ್ಕೆ ಸಂಬಂಧಿಸಿ ದಂಪತಿಗೆ ತಂಡವೊಂದು ಹಲ್ಲೆ ಮಾಡಿದ ಘಟನೆ ಇಲ್ಲಿನ ಕಲ್ಲಡ್ಕ ಸಮೀಪದ ಕೆ.ಸಿ. ರೋಡ್ ನಲ್ಲಿ ನಡೆದಿದೆ. ಹಲ್ಲೆಯ ವೇಳೆ ಮಹಿಳೆಯ ಚಿನ್ನದ ಸರ ಕೂಡ ನಾಪತ್ತೆಯಾಗಿದೆ ಎಂಬ ದೂರು ಕೇಳಿಬಂದಿದೆ. ಪುತ್ತೂರು ಎರ್ಮುಂಜಪಲ್ಲ ನಿವಾಸಿ ಮಂಜುನಾಥ ಮತ್ತು ಪೂರ್ಣಿಮಾ ದಂಪತಿಯ ಮೇಲೆ ನಾಲ್ವರ ತಂಡ ಹಲ್ಲೆ ನಡೆಸಿದೆದೆ. ಇದೇ ವೇಳೆ ಪೂರ್ಣಿಮಾರ ಚಿನ್ನದ ಸರ ಕಾಣೆಯಾಗಿದೆ ಎಂದು ದೂರರಲಾಗಿದೆ. ದಂಪತಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರೊಂದು ಓವರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿ ಹೊಡೆದಿದೆ. ಈ ವೇಳೆ ಕೈ ಸನ್ನೆಯಲ್ಲಿ ಪ್ರಶ್ನಿಸಿದದರು ಎಂದು ಬೆನ್ನಟ್ಟಿಕೊಂಡು ಬಂದು ದಂಪತಿಯನ್ನು ಅಡ್ಡಕಟ್ಟಿ ಹಲ್ಲೆ ಮಾಡಲಾಗಿದೆ. ನರಹರಿಪರ್ವತದ ಬಳಿ ಅಪಘಾತವಾಗಿದ್ದು, ಕೆ ಸಿ ರೋಡ್ ವರೆಗೆ ಬೆನ್ನಟ್ಟಿಕೊಂಡು ಬಂದು ಹಲ್ಲೆ ಮಾಡಲಾಗಿದೆ. ಮಂಜುನಾಥರ ಕಣ್ಣಿಗೆ ಗಾಯವಾಗಿದೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES
- Advertisment -
Google search engine

Most Popular