Saturday, February 15, 2025
Homeಬಂಟ್ವಾಳಕಲ್ಲಡ್ಕ,ಕುದ್ರೆಬೆಟ್ಟು ಮಣಿಕಂಠ ಮಂದಿರದ ಸಪ್ತ ದಶೋತ್ಸವ ಹಾಗೂ ಶ್ರೀ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳ...

ಕಲ್ಲಡ್ಕ,ಕುದ್ರೆಬೆಟ್ಟು ಮಣಿಕಂಠ ಮಂದಿರದ ಸಪ್ತ ದಶೋತ್ಸವ ಹಾಗೂ ಶ್ರೀ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳ ಕೋಲ ಸೇವೆ ಕಾರ್ಯಕ್ರಮ

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕ ಕುದ್ರೆಬೆಟ್ಟು ಜನಶಕ್ತಿ ಸೇವಾ ಟ್ರಸ್ಟ್( ರಿ.), ಶ್ರೀ ಮಣಿಕಂಠ ಯುವಶಕ್ತಿ (ರಿ.), ಶ್ರೀ ಮಣಿಕಂಠ ಮಾತೃಶಕ್ತಿ ಇದರ ಮಣಿಕಂಠ ಮಂದಿರದ “ಸಪ್ತ ದಶೋತ್ಸವ “ಹಾಗೂ ಶ್ರೀ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳ ಕೋಲ ಸೇವೆ ದಿನಾಂಕ 2-2-2025 ನೇ ಆದಿತ್ಯವಾರ ಜರಗಲಿರುವುದು.

ಬೆಳಿಗ್ಗೆ 5:00ಗೆ ಸರಿಯಾಗಿ ಗಣ ಹೋಮ ನಡೆದು ಬೆಳಿಗ್ಗೆ ಗಂಟೆ 6 ರಿಂದ ಸಂಜೆ ಗಂಟೆ 8ರ ತನಕ ವಿವಿಧ ಭಜನಾ ಮಂಡಳಿಗಳ ಸಹಕಾರದಿಂದ ಪೂರ್ಣಹ ಭಜನಾ ಕಾರ್ಯಕ್ರಮ ನೆರವೇರಲಿರುವುದು. ಭಜನಾ ಮಂಗಳಾರತಿ ಬಳಿಕ ಪ್ರಸಾದ ವಿತರಣೆ ಸಾರ್ವಜನಿಕ ಅನ್ನ ಸಂತರ್ಪಣೆ ನಂತರ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳ ಕೋಲ ಸೇವೆ ದಿನಾಂಕ 03-02-2025 ಸೋಮವಾರ ಮಧ್ಯಾಹ್ನ ಆಗೆಲು ಸೇವೆ ಜರಗಲಿರುವುದು.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗಬೇಕಾಗಿ ಕಾರ್ಯಕ್ರಮದ ಸಂಘಟಕರಾದ ಜನಶಕ್ತಿ ಸೇವಾ ಟ್ರಸ್ಟ್( ರಿ.), ಶ್ರೀ ಮಣಿಕಂಠ ಯುವಶಕ್ತಿ (ರಿ.), ಶ್ರೀ ಮಣಿಕಂಠ ಮಾತೃಶಕ್ತಿ ಕುದ್ರೆಬೆಟ್ಟು ಕಲ್ಲಡ್ಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES
- Advertisment -
Google search engine

Most Popular