Sunday, July 14, 2024
Homeಧಾರ್ಮಿಕಮಾ.8ರಿಂದ ಕಲ್ಲುಡೇಲು ಜಾತ್ರಾ ಮಹೋತ್ಸವ

ಮಾ.8ರಿಂದ ಕಲ್ಲುಡೇಲು ಜಾತ್ರಾ ಮಹೋತ್ಸವ

ವಾಮಂಜೂರು: ಬೊಂಡಂತಿಲ ಕಲ್ಲುಡೇಲು ಶ್ರೀ ಸದಾಶಿವ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಪೂಜೆ, ತಂಬಿಲ, ತುಲಾಭಾರ, ಕಲಶ ಪ್ರತಿಷ್ಠೆ, ಕಲಶಾಭಿಷೇಕ ನೇಮೋತ್ಸವ ಮಾ.8ರಿಂದ 10ರವರೆಗೆ ನಡೆಯಲಿದೆ. ಮಾ.8ರಂದು ಶಿವರಾತ್ರಿ ಉತ್ಸವವಾಗಿದ್ದು, ಸಂಜೆ 4ರಿಂದ ಶತರುದ್ರಾಭಿಷೇಕ ಪ್ರಾರಂಭ, 7.00ರಿಂದ ಭಜನೆ, ರಾತ್ರಿ 10ರಿಂದ ರಂಗಪೂಜೆ ನಡೆಯಲಿದೆ. ಫೆ.9ರಂದು ಬೆಳಗ್ಗೆ 7ರಿಂದ ಗಣಹೋಮ, ಶತರುದ್ರಾಭಿಷೇಕ, ನಾಗದೇವರಿಗೆ ಆಶ್ಲೇಷ ,ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 1ರಿಂದ ಮಹಾ ಅನ್ನಸಂತರ್ಪಣೆ, ರಾತ್ರಿ 6.30ಕ್ಕೆ ಮೈಸಂದಾಯ ಧೂಮಾವತಿ ಹಾಗೂ ಬಂಟ ದೈವಗಳ ಭಂಡಾರ ಹೊರಡುವುದು. 7.15ಕ್ಕೆ ರಂಗಪೂಜೆ, 7.45ರಿಂದ ದೇವರ ಬಲಿ ಮಹೋತ್ಸವ, 9ರಿಂದ ಕಾಲಾವಧಿ ನೇಮೋತ್ಸವ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ನಾಗರಾಜ ರೈ ತಿಮಿರಿಗುತ್ತು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular