ಕಾರ್ಕಳ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳತ್ರಪಾದೆಯಲ್ಲಿ ಜ. 12ರಂದು ಬೆಳಗ್ಗೆ 9 ಗಂಟೆಯಿಂದ 12.30ರವರೆಗೆ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ.
ಶಿಬಿರವು ರೋಟರಿ ಕ್ಲಬ್ ಕಾರ್ಕಳ, ಜೆಸಿಐ ಕಾರ್ಕಳ ಸೀನಿಯರ್ ಚೇಂಬರ್ ಕಾರ್ಕಳ ರಾಕ್ ಸಿಟಿ, ಯುವ ವಾಹಿನಿ (ರಿ.) ಕಾರ್ಕಳ ಹಳೆ ವಿದ್ಯಾರ್ಥಿ ಸಂಘ ಕಳತ್ರಪಾದೆ, ಯಕ್ಷಾಭಿಮಾನಿಗಳ ಬಳಗ ಕಳತ್ರಪಾದೆ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಪ್ರಸಾದ್ ನೇತ್ರಾಲಯ, ಉಡುಪಿ (ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ (ಅಂಧತ್ವ ನಿವಾರಣಾ ವಿಭಾಗ) ಇವರ ಸಹಯೋಗದೊಂದಿಗೆ ನಡೆಯಲಿದೆ.
ಶಿಬಿರದಲ್ಲಿ ಕಣ್ಣಿನ ತಪಾಸಣೆ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ಗೊತ್ತುಪಡಿಸಿದ ದಿನಾಂಕದಂದು ಉಡುಪಿಯ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ತಮ್ಮದೇ ಆದ ವಾಹನದಲ್ಲಿ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ಮಾಡಿಸಿ ಮರುದಿನ ವಾಪಾಸು ಕರೆದುಕೊಂಡು ತಂದು ಬಿಡಲಾಗುವುದು. ಶಿಬಿರಕ್ಕೆ ಬರುವವರು ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕಿದೆ. ಅಂತೆಯೇ ನೇತ್ರದಾನದ ಬಗ್ಗೆ ವಾಗ್ದಾನ ಹಾಗೂ ನಂದಾಣಿ ಮಾಡಲು ಸೂಕ್ತ ವ್ಯವಸ್ಥೆ ಕಲ್ಲಪಿಸಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಮಧುಕರ್ ಕನ್ನಾರ್ 9844761421, ಜೆಸಿ ಮೋಹನ್‌ದಾಸ್ ಶೆಣೈ 8496895530, ಇಕ್ಬಾಲ್ 9880313852, ಸುಧಾಕರ್ ಕಾರ್ಕಳ 9448608426, ಸಂದೀಪ್ ಪೂಜಾರಿ 9880018152, ಮಮತಾ ಅಂಚನ್, ಅಜಿತ್ ಶೆಟ್ಟಿ, ಜೆಸಿ ಪ್ರಚೀತ್ 9980952026 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.