ಕಂಬಳ ಕ್ಷೇತ್ರದ ದಿಗ್ಗಜ ಓಟಗಾರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದ ಸತೀಶ್ ದೇವಾಡಿಗ ಅಳದಂಗಡಿ ಇವರನ್ನು ವೇಣೂರು ಮೂಡುಕೋಡಿಯಲ್ಲಿ ಕಾಟಿ ಅಭಿಮಾನಿ ಬಳಗ ವೇಣೂರು ಮೂಡುಕೋಡಿ ಇದರ ವತಿಯಿಂದ ಅಭಿಮಾನಿಗಳ ಸಮುಖದಲ್ಲಿ ಗಣೇಶ್ ನಾರಾಯಣ್ ಪಂಡಿತ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಹಿಂದುಳಿದ ಮೋರ್ಚಾದ ಉಪಾಧ್ಯಕ್ಷರಾದ ರಾಜೇಶ್ ಪೂಜಾರಿ, ಗ್ರಾಮ ಪಂಚಾಯತ್ ಸದ್ಯಸರಾದ ಅನೂಪ್ ಜೆ ಪಾಯಸ್, ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷರಾದ ಸುದರ್ಶನ್ ಕೋಟ್ಯಾನ್, ಗೆಜ್ಜೆಗಿರಿ ಮೇಳದ ಪ್ರಬಂಧಕರು ನಿತಿನ್ ಕುಮಾರ್, ಶ್ರೀಧರ ಪೂಜಾರಿ ಬಟ್ಟನಿ, ಪ್ರದೀಪ್ ಶಾಂತಿ, ಸಂಕೇತ್ ಶಾಂತಿ, ರಾಜೇಶ್ ಶಾಂತಿ, ರೋಹಿತ್ ಶಾಂತಿ, ಲಕ್ಷ್ಮಣ ಶಾಂತಿ, ಪ್ರವೀಣ್ಊರಿಂಜೇಬೆಟ್ಟು, ಪ್ರನೀತ್ ಶೆಟ್ಟಿ, ಶಮಂತ್, ದೇಜಪ್ಪ ಪೂಜಾರಿ, ಹನುಮಾಗಿರಿ ಮೇಳದ ಕಲಾವಿದ ಅಭಿಷೇಕ್ ಕಲಡ್ಕ ಹಾಗೂ ಕಾಟಿ ಅಭಿಮಾನಿ ಬಳಗದ ಸದ್ಯಸರು, ಹಿತೈಷಿಗಳು ಉಪಸ್ಥಿತರಿದ್ದರು.

