ದೇವಾಲಯಗಳ ನಗರಿ ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಅನಾದಿ ಕಾಲದಿಂದಲೂ ಆಸ್ತಿಕರ ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ಭಕ್ತರ ಸಕಲ ಇಷ್ಟಾರ್ಥಗಳು ಈಡೇರುತ್ತಿರುವ ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯಿರುವ ಶ್ರೀ ರಕೇಶ್ವರಿ ಮತ್ತು ವ್ಯಾಘ್ರ ಚಾಮುಂಡಿ ದೈವಗಳ ವರ್ಷಂಪ್ರತಿ ನಡೆಯಲಿರುವ ಕಂಬಳಕೋಲ 25-11-2024 ನೇ ಸೋಮವಾರ ಮಾಭಿಗುತ್ತಿವಿನಲ್ಲಿ ಜರುಗಲಿರುವುದು.
ಬೆಳಿಗ್ಗೆ 9 ಗಂಟೆಗೆ ಶ್ರೀ ದೈವಗಳ ಭಂಡಾರ ವಿಜೃಂಭಣೆಯಿಂದ ತೀರ್ಥಬೆಟ್ಟುಗುತ್ತಿವಿನಿಂದ ಹೊರಡುವುದು.
ಬಳಿಕ ಮಧ್ಯಾನ್ಹ 11 ಗಂಟೆಗೆ ನಂದಿಗೋಣ ಕೋಲ, ಸಂಜೆ 3.30 ರಿಂದ ದೈವಗಳ ನೇಮ, ಕಂಬಳವು ನಡೆಯಲಿದೆ.