ದಾವಣಗೆರೆ-ನವಂಬರ್,
ಪರಮಪೂಜ್ಯ ಮದ್ವಾಚಾರ್ಯರೂ ಪ್ರತಿಷ್ಠಾಪಿಸಿದ ಉಡುಪಿಯ ಶ್ರೀ ಕೃಷ್ಣ ವಿಗ್ರಹವನ್ನು ಪೂರ್ವದಿಂದ ಪಶ್ಚಿಮಕ್ಕೆ ತನ್ನ ದರ್ಶನಕ್ಕಾಗಿ ಪರಿವರ್ತಿಸಿದ್ದು ಶ್ರೀ ಕನಕದಾಸರು. ಕನಕದಾಸರ ಕೀರ್ತನೆಗಳು ಮಾನವನ ಜೀವಕ್ಕೆ ಪರಿವರ್ತನಕ್ಕೆ ಪ್ರಾರ್ಥನೆ. ಮಕ್ಕಳು ಶಿಕ್ಷಣದ ಜತೆಯಲ್ಲಿ ಈ ಭಕ್ತಿ, ಭಾವಗಳ ಪರಂಪರೆಯನ್ನು ಅಳವಡಿಸಬೇಕಾಗಿದೆ ಆಗ ವಿದ್ಯಾಭ್ಯಾಸಕ್ಕೆ ಪರಿಪೂರ್ಣತೆ ಬರುತ್ತದೆ ಎಂದು ದಾವಣಗೆರೆಯ ಕಲಾಕುಂಚ
ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಮ್ಮ ಅಂತರಾಳದ ಭಾವನೆ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸಿಂಗಟಗೆರೆ ಗ್ರಾಮದ ಕಿತ್ತೂರು ರಾಣಿಚೆನ್ನಮ್ಮ ವಸತಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಿನ್ನೆ ದಿನ ಕನಕದಾಸ ಜಯಂತಿ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆ ಎದುರಿಸುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪರೀಕ್ಷಾ ಪೂರ್ವ ಸಿದ್ಧತಾ ಉಚಿತ ಕಾರ್ಯಾಗಾರ ಉದ್ಘಾಟಿಸಿ ಶೆಣೈಯವರು ಮಕ್ಕಳ ಉತ್ತಮ ಫಲಿತಾಂಶಕ್ಕಾಗಿ ಪ್ರತಿಜ್ಞಾವಿಧಿ ಭೋದಿಸಿದರು. ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಡಿ.ಸಿ.ಎಂ.ಶಾಖೆಯ ಪ್ರಧಾನ ಕಾರ್ಯದರ್ಶಿ ಡಿ.ಹೆಚ್.ಚನ್ನಬಸಪ್ಪ ಹಾಗೂ ಶಿಕ್ಷಕ-ಶಿಕ್ಷಕಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಕುಶಾಲ ಮತ್ತು ಸಂಗಡಿಗರ ಪ್ರಾರ್ಥನೆಯೊಂದಿಗೆ
ಪ್ರಾರಂಭವಾದ ಸಮಾರಂಭಕ್ಕೆ ವಿದ್ಯಾರ್ಥಿನಿ ಕುಮಾರಿ ಪ್ರೀತಿ ಆರ್. ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕರಾದ ಹಾಲೇಶನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಸ್ಪಂದನ ಎಸ್. ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕುಮಾರಿ ಅಕ್ಷತ ಎಂ. ವಂದಿಸಿದರು.