ನವದೆಹಲಿ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ನೂತನ ಸಂಸದೆ, ನಟಿ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿ ಸುದ್ದಿಯಾಗಿದ್ದ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಊಹಾಪೋಹಗಳು ಹರಡಿವೆ. ವರ್ಗಾವಣೆ ಕುರಿತ ವದಂತಿಗಳ ಹಿನ್ನೆಲೆಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸ್ಪಷ್ಟನೆ ನೀಡಿದೆ.
ನಟಿ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಅಲ್ಲದೇ ಅವರನ್ನು ಚಂಡೀಗಢದಿಂದ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂದು ವರದಿಗಳಾಗಿದ್ದವು. ಆದರೆ ಈ ಬಗ್ಗೆ ಇದೀಗ ಸಿಐಎಸ್ಎಫ್ ಸ್ಪಷ್ಟನೆ ಕೊಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದೆ. ಸಂಸದೆ ಕಂಗನಾ ರಣಾವತ್ ಮೇಲೆ ಹಲ್ಲೆ ನಡೆಸಿದ್ದ ಕುಲ್ವಿಂದರ್ ಸಿಂಗ್ ಅಮಾನತಿನಲ್ಲಿದ್ದಾರೆ. ಅಲ್ಲದೆ ಅವರ ವಿರುದ್ಧ ಇಲಾಖಾ ತನಿಖೆ ನಡೆಯುತ್ತಿದೆ ಎಂದು ಸಿಐಎಸ್‌ಎಫ್ ಸ್ಪಷ್ಟಪಡಿಸಿದೆ.
ಜೂ. 7ರಂದು ಕಂಗನಾ ಮೇಲೆ ಚಂಡೀಗಢ ವಿಮಾನ ನಿಲ್ದಾನದಲ್ಲಿ ಕುಲ್ವಿಂದರ್ ಕೌರ್ ಹಲ್ಲೆ ನಡೆಸಿದ್ದರು. ರೈತರ ಆಂದೋಲನಕ್ಕೆ ಸಂಬಂಧಿಸಿ ಕಂಗನಾರ ಹೇಳಿಕೆಯಿಂದ ನೋವಾಗಿ ಈ ಹಲ್ಲೆ ನಡೆಸಿದುದಾಗಿ ಕುಲ್ವಿಂದರ್ ಹೇಳಿದುದಾಗಿ ವರದಿಗಳಾಗಿದ್ದವು.