ಚಿಪ್ಪಾರು : ಬಾಯಾರು ಗ್ರಾಮದ ಕಣಿಹಿತ್ತಿಲು ಶ್ರೀಮಲರಾಯಿ ಧೂಮಾವತೀ ಪಂಜುರ್ಲಿ ನಾಗ ಪರಿವಾರ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಬಳಿಕ ವಾರ್ಷಿಕ ಮಹಾ ಸಭೆಯು ಬಂಟಪ್ಪ ಪೂಜಾರಿ ನೇರೊಳ್ತಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ “ದೈವದ ಸೇವೆ ಮಾಡುವಲ್ಲಿ ದೈವಾನುಗ್ರಹ ಹೊಂದಿರಬೇಕು. ಆ ಭಾಗ್ಯ ನಮ್ಮದಾಗಿದೆ ಆದ್ದರಿಂದ ಕಳೆದ ಎಪ್ರಿಲ್ ತಿಂಗಳಲ್ಲಿ ದೈವಗಳ ಪುನರ್ ಪ್ರತಿಷ್ಠೆ,ಸತ್ಯಚಾವಡಿ[ ಮುಖಮಂಟಪ] ದೈವಗಳಿಗೆ ಸಮರ್ಪಣೆ ಯಶಸ್ವಿಯಾಗಿ ನಡೆದಿರುವುದಕ್ಕೆ ನಿದರ್ಶನ” ಎಂದರು. ಈ ಸಂಧರ್ಭದಲ್ಲಿ ಕಳೆದ ವಾರ್ಷಿಕ ಉತ್ಸವದ ಲೆಕ್ಕಪತ್ರ ಮಂಡನೆಯನ್ನು ಪ್ರೇಮ್ ಜೀತ್ ಕಾಸರಗೋಡು ಮಾಡಿದರು, ಕಾರ್ಯದರ್ಶಿ ನಾರಾಯಣ ಕೊರಕ್ಕೋಡು,ಕೋಶಾಧಿಕಾರಿ ಕೃಷ್ಣ ಕುಮಾರ್ ಅಲೆಕ್ಕಾಡಿ, ವಿಜೇಯೆಶ್ ಕಾನ,ಶ್ರೀಧರ್ ಬಾಳೆಕಲ್ಲು, ಮೊದಲಾದವರು ಉಪಸ್ಥಿತರಿದ್ದರು, ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಕೊರಗಪ್ಪ ಸ್ವಾಮಿ KSRTC ಕಾಸರಗೋಡು, ಕೃಷ್ಣಪ್ಪ ಪೂಜಾರಿ ತರವಾಡು ಮಲರಾಯಿ ದೈವದ ಪೂಜಾರಿ, ಬಂಟಪ್ಪ ಪೂಜಾರಿ ನೇರೊಳ್ತಡಿ ನಾರಾಯಣ ಕೊರೊಕ್ಕೊಡು, ಕೃಷ್ಣ ಕುಮಾರ್ ಅಲೆಕ್ಕಾಡಿ, ಕೊರಗಪ್ಪ ಪೂಜಾರಿ ಸುಣ್ಣಾಡ ಕಾಂತಪ್ಪ ಬಂಗೇರ ಬಳಂತಿಮುಗೇರು ಅಧ್ಯಕ್ಷರಾಗಿ ಶ್ರೀಧರ್ ಬಾಳೆಕಲ್ಲು ಕುದ್ವಶಾಖೆ, ಉಪಾಧ್ಯಕ್ಷರಾಗಿ ಸತೀಶ್ ಗುಂಡ್ಯಡ್ಕ ಶಾಖೆ,
ಶ್ರೀಧರ್ ಕುಕ್ಕಾಜೆ ಪೆಲ್ತಡಿ ಶಾಖೆ, ಕಾರ್ಯದರ್ಶಿಯಾಗಿ ಚಿದಾನಂದ ಕೆಮನಾಜೆ ಶಾಖೆ, ಜತೆ ಕಾರ್ಯದರ್ಶಿಗಳಾಗಿ ದಿನೇಶ್ ಬಂಬ್ರಾಣ ಬೆಳ್ಳೂರು ಶಾಖೆ, ಪುನೀತ್ ಕೆಮ್ಮಣ್ಣು ಶಾಖೆ,ಕೋಶಾಧಿಕ್ಕಾರಿ ವಿಜೇಯೆಶ್ ಕಾನ,ಲೆಕ್ಕ ಪರಿಶೋಧಕರು ಪ್ರೇಮ್ ಜೀತ್ ಕಾಳ್ಯಾಂಗಾಡು ಶಾಖೆ, ಹಾಗೂ 20 ಮಂದಿಯನ್ನು ಕಾರ್ಯಕಾರಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ನಾರಾಯಣ ಕೊರೊಕ್ಕೊಡು ಸ್ವಾಗತಿಸಿ ಪ್ರೇಮ್ ಜೀತ್ ಕಾಸರಗೋಡು ವಂದಿಸಿದರು.