ಪ್ರತಿಬಿಂಬ ಅಮ್ಮ ಅರ್ಪಿಸುವ,ಸಾಮಾಜಿಕ ಹೋರಾಟಗಾರರು ಹಾಗೂ ಸಾಹಿತಿ ಸುಭಾಷ್ ಎಸ್ ರವರ ಸಾಹಿತ್ಯ ಮತ್ತು ನಿರ್ಮಾಣದಲ್ಲಿ ರವಿ ಪಂಬಾರ್ ಸಂಗೀತ ಗಾಯನದಲ್ಲಿ ಮೂಡಿಬಂದಿರುವ “ಕೃಷ್ಣ ರಾಧೆಯನ್ನು.. ಪ್ರೀತಿಸಿದ ಯಾರು ಕಾಣದಂತೆ..” ಎಂಬ ಹಾಡಿನ ಆಲ್ಬಮ್ ನ ಪೋಸ್ಟರ್ ಎಪ್ರಿಲ್ 20ರಂದು ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕೊಳ್ತಿಗೆಯಲ್ಲಿ ಬಿಡುಗಡೆಯಾಗಿರುತ್ತದೆ. ಈ ಕನ್ನಡ ಆಲ್ಬಂ ಹಾಡು ಸುಭಾಷ್ ಕ್ರಿಯೇಷನ್ ಯ್ಯೂಟುಬ್ ಚಾನೆಲ್ ಹಾಗೂ ಫೇಸ್ ಬುಕ್ ನಲ್ಲಿ ದಿನಾಂಕ 21-04-2024 ರಂದು ಪುತ್ತೂರಿನ ಪ್ರಜ್ಞಾ ಆಶ್ರಮದ ದೇವರ ಮಕ್ಕಳೊಂದಿಗೆ ಬಿಡುಗಡೆ ಮಾಡಿ ಪ್ರಸಾರವಾಗಿದೆ. ಈ ಆಲ್ಬಂ ಹಾಡಿನ ಯಶಸ್ವಿಗೆ ಕಾರಣರಾದ ಡಾ. ವಿದುಷಿ ಪವಿತ್ರ ರೂಪೇಶ್ ಪುತ್ತೂರು, ಸುಭಾಷ್ ಮಿಜಾರು, ಶ್ರೀ ಮಂತ್ರ ,ಬಾಬು.ಬಿ.ಎಸ್, ದೇವರಾಜ್ ಆರಕ್ಷಕ ಇಲಾಖೆ ಬೆಂಗಳೂರು, ಪ್ರಿಯಾ ಸುಳ್ಯ ಹಾಗೂ ಪ್ರಜ್ಞಾ ಆಶ್ರಮದ ಸದಸ್ಯರು ಹಾಗೂ ದೇವರ ಮಕ್ಕಳು ,ರಾಜು ಬೆಂಗಳೂರು, ಅರುಣ್ ರವರು ಈ ಆಲ್ಬಮ್ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.