Saturday, April 19, 2025
Homeಮಂಗಳೂರು'ಅದ್ಯಪಾಡಿಯ ಪುಣ್ಯತೀರ್ಥ' ಕನ್ನಡ ಭಕ್ತಿಗೀತೆ ಲೋಕಾರ್ಪಣೆ

‘ಅದ್ಯಪಾಡಿಯ ಪುಣ್ಯತೀರ್ಥ’ ಕನ್ನಡ ಭಕ್ತಿಗೀತೆ ಲೋಕಾರ್ಪಣೆ

ಮಂಗಳೂರು : ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವದ ಅಂಗವಾಗಿ ವಿನೋಧರಾ ಪೂಜಾರಿ ಅವರು ನಿರ್ಮಿಸಿ ಪಿಜಿಏಕೆ ಸ್ಟುಡಿಯೋ ಅರ್ಪಿಸಿರುವ ‘ಅದ್ಯಪಾಡಿಯ ಪುಣ್ಯತೀರ್ಥ’ ಕನ್ನಡ ಭಕ್ತಿ ಗೀತೆ ಇತ್ತೀಚೆಗೆ ಲೋಕಾರ್ಪಣೆಗೊಂಡಿತು.

ದೇವಾಲಯದ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಧ್ವನಿಸುರುಳಿ ಬಿಡುಗಡೆಗೊಳಿಸಿದರು. ಈ ಸಂದರ್ಭ ದೇಗುಲದ ಪ್ರಧಾನ ಅರ್ಚಕ ಸದಾಶಿವ ಭಟ್, ಆರ್‌ಎಸ್ಸೆಸ್ ಮುಖಂಡ ಪಿ.ಎಸ್.ಪ್ರಕಾಶ್, ವಾಗ್ಮಿ ಡಾ.ಅರುಣ್ ಉಳ್ಳಾಲ್, ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಜೀತ್ ಅಳ್ವ ಏತಮೊಗರು ಗುತ್ತು, ಶೋಧನ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

ಬ್ರಿಜೇಶ್ ಕುಮಾರ್ ರೈ ಸಹ ನಿರ್ಮಾಪಕರಾಗಿದ್ದು, ಕಲಾ ಸಿಂಚನ ಮೊಹೀತ್ ಪೂಜಾರಿ ಅಡು ಸಾಹಿತ್ಯದಲ್ಲಿ ಮೂಡಿ ಬಂದಿರುವ ಹಾಡಿಗೆ ವಿದುಷಿ ಡಾ.ರೂಪಶ್ರೀ ಶ್ರವಣ್, ಆದ್ಯಾ ವಿ.ಸಾಲ್ಯಾನ್, ಶ್ರವಣ್ ಕುಮಾರ್ ಕೊಳಂಬೆ ಧ್ವನಿಯಾಗಿದ್ದಾರೆ. ಗಣೇಶ್ ಅದ್ಯಪಾಡಿ ಚಿತ್ರೀಕರಣ ಹಾಗೂ ಪ್ರಸಾದ್ ಆಚಾರ್ಯ ಕೊಳಂಬೆ ಸಂಕಲನ ಮಾಡಿದ್ದಾರೆ. ಹಾಡಿನ ರೆಕಾರ್ಡಿಂಗ್ ಸಪ್ತಕ್ ಸ್ಟುಡಿಯೋ (ಚಿದಾನಂದ ಕಡಬ)ದಲ್ಲಿ ನಡೆದಿತ್ತು.

RELATED ARTICLES
- Advertisment -
Google search engine

Most Popular