ಮಲಯಾಳಂ ಸಿನೆಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯ ಕುರಿತ ಅಧ್ಯಯನಕ್ಕೆ ರಚನೆಯಾದ ಹೇಮಾ ಕಮಿಟಿಯಂತೆ ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ಕಿರುಕುಳ ತಡೆಗೆ ಸಮಿತಿ ರಚಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ಇಂದು (ಸೆ.5) ನಟ ಚೇತನ್ ನೇತೃತ್ವದ ‘ಫೈರ್’ ಸಂಸ್ಥೆ ಮೂಲಕ ಮನವಿ ಪತ್ರ ಸಲ್ಲಿಸಲಾಗಿದೆ.
ಸ್ಯಾಂಡಲ್‌ವುಡ್ ನಟರಾದ ಸುದೀಪ್, ರಮ್ಯಾ, ಶ್ರದ್ಧಾ ಶ್ರೀನಾಥ್, ನೀತು, ಚೇತನ್ ಅಂಹಿಸಾ ಸೇರಿದಂತೆ 140ಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರು ಮತ್ತು ಸಾಹಿತಿಗಳು ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಸದ್ಯದಲ್ಲೇ ಸಮಿತಿ ರಚನೆಯ ಕುರಿತು ಚರ್ಚಿಸಿ ನಿರ್ಧಾರಕ್ಕೆ ಬರೋಣ ಎಂದು ಸಿಎಂ ‘ಫೈರ್’ ತಂಡಕ್ಕೆ ಭರವಸೆ ನೀಡಿದ್ದಾರೆ. ಸೆ.10ರ ಬಳಿಕ ಮತ್ತೊಮ್ಮೆ ಸಭೆ ಮಾಡೋಣ ಎಂದು `ಫೈರ್’ ತಂಡಕ್ಕೆ ಸಿಎಂ ತಿಳಿಸಿದ್ದಾರೆ. ಇನ್ನೂ ಸಿಎಂ ಜೊತೆಗಿನ ಸಭೆಯಲ್ಲಿ ನಟ ಚೇತನ್ ಜೊತೆ ನೀತು ಶೆಟ್ಟಿ, ಶೃತಿ ಹರಿಹರನ್, ಹಿರಿಯ ಪತ್ರಕರ್ತೆ ವಿಜಯಮ್ಮ ಉಪಸ್ಥಿತರಿದ್ದರು.
ಮಲಯಾಳಂ ಸಿನಿಮಾ ರಂಗದಲ್ಲಿ ಜಸ್ಟಿಸ್ ಹೇಮಾ ವರದಿ ಬಿರುಗಾಳಿಯನ್ನೇ ಎಬ್ಬಿಸಿದೆ. ಒಂದು ವಾರದಿಂದ ಮಲಯಾಳಂ ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ಕಿರುಕುಳಕ್ಕೆ ಸಂಬಂಧಿಸಿದಂತೆ ದೂರುಗಳು ದಾಖಲಾಗುತ್ತಿವೆ. ಹಲವರ ತಲೆದಂಡ ಕೂಡ ಆಗಿದೆ. ಕಲಾವಿದರ ಸಂಘದ ಅಧ್ಯಕ್ಷರಿಂದ ಹಿಡಿದು, ಪದಾಧಿಕಾರಿಗಳು ಕೂಡ ರಾಜಿನಾಮೆ ಸಲ್ಲಿಸಿದ್ದಾರೆ. ಈಗ ಅಂಥದ್ದೊಂದು ಕಮಿಟಿಯನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ರಚಿಸಬೇಕು ಎಂದು ಸ್ಯಾಂಡಲ್‌ವುಡ್‌ನಲ್ಲೂ ಒತ್ತಾಯ ಕೇಳಿಬಂದಿದೆ.
ಹೇಮಾ ಕಮಿಟಿಯಂತೆ ಕನ್ನಡ ಚಿತ್ರರಂಗದ ಲೈಂಗಿಕ ಕಿರುಕುಳ ತಡೆಗೆ ಸಮಿತಿ ರಚಿಸುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ
RELATED ARTICLES