26.6 C
Udupi
Tuesday, November 29, 2022
spot_img

ಕನ್ನಡ ಎಂದರೆ ಬರೀ ನುಡಿಯಲ್ಲ ಅದು ನಮ್ಮ ಸಂಸ್ಕೃತಿಯನ್ನು ಅರ್ಥೈಸುವ ಭಾಷೆ: ಚಕ್ರವರ್ತಿ ಸೂಲಿಬೆಲೆ


ಮಂಗಳೂರು: ನ 21, ಭಾರತ ಜನ್ಯವಾದ ಎಲ್ಲಾ ಭಾಷೆಗಳು ನೂರು ಪ್ರತಿಶತ ವೈಜ್ಞಾನಿಕವಾಗಿವೆ. ನಮಗೆಲ್ಲರಿಗೂ ಬರೆದಂತೆಯೇ ಓದುವ ಸಾಮರ್ಥ್ಯ ನೀಡಿದ್ದು ನಮ್ಮ ಭಾಷೆ. ಅಕ್ಷರಗಳ ಜನನವೂ ವ್ಯವಸ್ಥಿತವಾಗಿರುವ ವಿಶಿಷ್ಠ ಭಾಷೆ ನಮ್ಮದು ಎಂದು ಖ್ಯಾತ ವಾಗ್ಮಿ ಹಾಗೂ ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ‘ಕನ್ನಡ ಎಂದರೆ ಬರಿ ನುಡಿಯಲ್ಲ’ ಎಂಬ ವಿಷಯದ ಕುರಿತು ಅವರು ಭಾನುವಾರ ಮಾತನಾಡಿದರು.

ಇಂಗ್ಲೀಷ್ ಒಂದು ಭಾಷೆ, ಕನ್ನಡ ಒಂದು ಸಂಸ್ಕೃತಿ. ಹಾಗಾಗಿ ಕನ್ನಡದಲ್ಲಿ ಕಲಿತ ಸಂಗತಿ ಹೆಚ್ಚು ಮನದಟ್ಟಾಗುತ್ತದೆ. ಇಂಗ್ಲೀಷ್ ಗೊಂದಲದ ಗೂಡಾಗಿದೆ. ಚಿಕ್ಕಂದಿನಿಂದಲೇ ಮಗು ಇಂಗ್ಲೀಷ್ ಮಾತಾಡಬೇಕು ಎನ್ನುವ ಪೋಷಕರು ಮಕ್ಕಳು ಸಂಸ್ಕೃತಿ ಮರೆಯುತ್ತಾರೆ ಎನ್ನುವುದನ್ನು ಗಮನಿಸುವುದು ಅಗತ್ಯವೆಂದು ಅಭಿಪ್ರಾಯಪಟ್ಟರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles