ಶಕ್ತಿನಗರದಲ್ಲಿ ಫೆ. 23 ಹಾಗೂ 26 ರಂದು ನಡೆಯಲಿರುವ ಎಸ್.ಪಿ.ಎಲ್ ನ ದ್ವಿತೀಯ ಆವೃತ್ತಿಯಲ್ಲಿ ಭಾಗವಹಿಸಲಿರುವ ತಂಡಗಳಲ್ಲೊಂದಾದ ಕಾನಡ್ಕ ನೈಟ್ ರೈಡರ್ಸ್ ತಂಡದ ಜೆರ್ಸಿ ಸಮವಸ್ತ್ರ ಬಿಡುಗಡೆ ಹಾಗೂ ಅನಾವರಣ ಸಮಾರಂಭವು ಶುಕ್ರವಾರ ನಡೆಯಿತು. ನೀಲಿ, ಗುಲಾಬಿ ಹಾಗೂ ಬಿಳಿ ಬಣ್ಣ ಮಿಶ್ರಿತ ಆಕರ್ಷಕ ಸಮವಸ್ತ್ರವನ್ನು ತಂಡ ಸದಸ್ಯರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಲಾಯಿತು. ಅಂಡರ್ ಆರ್ಮ್ ಕ್ರಿಕೆಟ್ ನಲ್ಲಿ ಮಹತ್ತರ ಸಾಧನೆಗೈದಿರುವ ಸಂದೀಪ್ ಕುಲಾಲ್, ಹರೀಶ್ ಮಂಜಡ್ಕ ಹಾಗೂ ಹರೀಶ್ ಕುಂಟಲ್ಪಾಡಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ದಂಡಕೇರಿ, ಬಿ.ಜೆ.ಪಿ ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಸುಮನ್ ಇವೆಂಟ್ಸ್ ನ ಮಾಲಕ ಸುಮನ್ ಲೆಸ್ರಾಡೋ, ಆಶೀರ್ವಾದ್ ಫಾನ್ಸಿ ಮಾಲಕ ಫಿಲಿಪ್ ಸಿಕ್ವೇರ, ಕೃಷಿಕ ವಿಜಯ್ ಶೆಣೈ, ಜಿ.ಎಮ್ ಶಾಮಿಯಾನ ಮಾಲಕ ಭರತ್, ತಂಡದ ಮೆಂಟರ್ ಗಳಾದ ದಯಾನಂದ ನಾಯ್ಕ್ ಹಾಗೂ ಪ್ರಸಾದ್. ಜಿ, ತಂಡದ ಮಾಲಕರಾದ ಅಭಿಷೇಕ್ ಮತ್ತು ಸುಹಾಸ್, ದಿನೇಶ್, ತಂಡದ ಸದಸ್ಯರು ಮತ್ತು ಮತ್ತಿತರರು ಉಪಸ್ಥಿತರಿದ್ದರು. ಕಾನಡ್ಕ ನೈಟ್ ರೈಡರ್ಸ್ ತಂಡದ ಎಲ್ಲಾ ಆಟಗಾರರಿಗೆ ಪೂರ್ಣ ಸಮವಸ್ತ್ರ ವಿತರಿಸಲಾಯಿತು. ರಕ್ಷಕ್ ಕಾರ್ಯಕ್ರಮ ನಿರೂಪಿಸಿದರು.