Sunday, July 14, 2024
Homeಮಂಗಳೂರುಕಾನಡ್ಕ ನೈಟ್ ರೈಡರ್ಸ್ ತಂಡದ ಜೆರ್ಸಿ ಅನಾವರಣ

ಕಾನಡ್ಕ ನೈಟ್ ರೈಡರ್ಸ್ ತಂಡದ ಜೆರ್ಸಿ ಅನಾವರಣ

ಮಂಗಳೂರು : ಶಕ್ತಿನಗರದಲ್ಲಿ ಇದೇ ಬರುವ ದಿನಾಂಕ ಮಾರ್ಚ್ 24 ಹಾಗೂ 31 ರಂದು ನಡೆಯಲಿರುವ ಎಸ್.ಪಿ.ಎಲ್ ನ ಮೊದಲ ಆವೃತ್ತಿಯಲ್ಲಿ ಭಾಗವಹಿಸಲಿರುವ ತಂಡಗಳಲ್ಲೊಂದಾದ ಕಾನಡ್ಕ ನೈಟ್ ರೈಡರ್ಸ್ ತಂಡದ ಜೆರ್ಸಿ ಸಮವಸ್ತ್ರ ಬಿಡುಗಡೆ ಹಾಗೂ ಅನಾವರಣ ಸಮಾರಂಭವು ದಿನಾಂಕ ಮಾರ್ಚ್ 21ರಂದು ನಡೆಯಿತು.

ಮೊದಲಿಗೆ ತಂಡದ ಪತಾಕೆಯನ್ನು ಬಿಡುಗಡೆಗೊಳಿಸಲಾಯಿತು. ನಂತರ ನೀಲಿ, ಹಳದಿ ಹಾಗೂ ಬಿಳಿ ಬಣ್ಣ ಮಿಶ್ರಿತ ಆಕರ್ಷಕ ಸಮವಸ್ತ್ರವನ್ನು ತಂಡ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಲಾಯಿತು. ಈ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಉಮೇಶ್ ದಂಡಕೇರಿ, ದಕ್ಷಿಣ ಕನ್ನಡ ಜಿಲ್ಲೆಯ ಬಿ.ಜೆ.ಪಿ ಯ ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾಧ್ಯಕ್ಷರಾದ ಮಹೇಶ್ ಜೋಗಿ, ಮಧುರಾ ಕೇಟರಿಂಗ್ ನ ಮಾಲಕರಾದ ಟಿ.ಪ್ರಸಾದ್ ಆಚಾರ್ಯ, ವುಡ್ ಮಾರ್ಟ್ ನ ಮಾಲಕರಾದ ಪ್ರಶಾಂತ್, ಸುಮನ್ ಇವೆಂಟ್ಸ್ ನ ಮಾಲಕರಾದ ಸುಮನ್ ಲೆಸ್ರಾಡೋ, ಆಶೀರ್ವಾದ್ ಫಾನ್ಸಿಯ ಮಾಲಕರಾದ ಫಿಲಿಪ್ ಸಿಕ್ವೇರ, ತಂಡದ ಮೆಂಟರ್ ಗಳಾದ ದಯಾನಂದ ನಾಯ್ಕ್ ಹಾಗೂ ಪ್ರಸಾದ್, ತಂಡದ ಮಾಲಕರಾದ ಅಭಿಷೇಕ್ ಮತ್ತು ಸುಹಾಸ್, ದಿನೇಶ್, ಯಶವಂತ್ ಹಾಗೂ ತಂಡದ ಸದಸ್ಯರು ಮತ್ತು ಇನ್ನಿತರರು ಉಪಸ್ಥಿತರಿದ್ದರು.

ಕಾನಡ್ಕ ನೈಟ್ ರೈಡರ್ಸ್ ತಂಡದ ಎಲ್ಲಾ ಆಟಗಾರರಿಗೆ ಪೂರ್ಣ ಸಮವಸ್ತ್ರವನ್ನು ವಿತರಿಸಲಾಯಿತು. ರಕ್ಷಕ್ ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ : ಧನುಷ್ ಶಕ್ತಿನಗರ

RELATED ARTICLES
- Advertisment -
Google search engine

Most Popular