Thursday, December 5, 2024
Homeಕಾಸರಗೋಡುಕಾಸರಗೋಡು ಕನ್ನಡ ಭವನದ ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಗೆ ಮೈಸೂರಿನಲ್ಲಿ "ಕನ್ನಡ ರಾಜ್ಯೋತ್ಸವ...

ಕಾಸರಗೋಡು ಕನ್ನಡ ಭವನದ ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಗೆ ಮೈಸೂರಿನಲ್ಲಿ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ”


ಕಾಸರಗೋಡು: ಕಾಸರಗೋಡಿನ ಹೆಮ್ಮೆಯ ಕನ್ನಡಪರ ಸಂಸ್ಥೆಯಾದ, ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯಗಳ ರೂವಾರಿಗಳಾದ ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ಟೀಚರ್ ದಂಪತಿಗೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಮತ್ತು ಸುಜ್ಞಾನ ವಿದ್ಯಾಪೀಠ ಹಾಗೂ ಸಾಹಿತ್ಯ ಸಾಂಸ್ಕೃತಿಕ ರಂಗ ಸಾಧಕರ ಶ್ರೀ ಮಾತಾ ಪ್ರಕಾಶನ (ರಿ.)ವಿಜಯನಗರ ಬೆಳ್ಳಾರಿ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸುವರ್ಣ ಸಂಭ್ರಮ, ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆದರ್ಶ ಕನ್ನಡ ದಂಪತಿಗಳು ಶೀರ್ಷಿಕೆಯಲ್ಲಿ ಗಡಿನಾಡು ಸಾಧಕರೀಗೆ ಸಲ್ಲುವ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ “ನೀಡಿ ಪುರಸ್ಕರಿಸಲಾಯಿತು. ಮೈಸೂರಿನ ಜಿಲ್ಲಾ ಸಾಹಿತ್ಯ ಭವನದ ನಾಲ್ವಡಿ ಕೃಷ್ಣರಾಜ ಸಭಾ ಅಂಗಣದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀ ಶ್ರೀ ಡಾ ಅವದೂತ ಮಹರ್ಷಿ ಸಿದ್ದಾರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಸುಜ್ಞಾನ ವಿದ್ಯಾಪೀಠದ ಡಾ ನಾಗರಾಜ್ ತಂಬ್ರಲ್ಲಿ, ಕ. ಸಾ. ಪ. ಮೈಸೂರು ಉಪಾಧ್ಯಕ್ಷ ಡಾ ಟಿ ತ್ಯಾಗರಾಜು ಮೈಸೂರು, ಡಾ ಪ್ರವೀಣ್ ರಾಜ್ ಎಸ್ ರಾವ್, ಲಯನ್ ಟಿ ಸುರೇಶ್ ಗೋಲ್ಡ್, ಡಾ ವೈ. ವೈ. ಕೊಕ್ಕನವರ, ಡಾ. ಎ. ಡಿ. ಕೊಟ್ನಾಳ್, ಶ್ರಿಮತಿ ಸುಮಾ ಬಸವರಾಜ್ ಹಡಪದ, ಡಾ ರಾಜು ಮೋರೆ, ಗೋವಿಂದ ಕಾಡಪ್ಪ ಮೇಲಗೇರಿ, ಡಾ ದೊಡ್ಡಪ್ಪ ಪೂಜಾರಿ ಹುಂಡೇಕಲ್ ಮುಂತಾದವರಿದ್ದರು.

RELATED ARTICLES
- Advertisment -
Google search engine

Most Popular