Monday, December 2, 2024
Homeಕಾರ್ಕಳಕಾರ್ಕಳದಲ್ಲಿ ಕನ್ನಡ ರಾಜ್ಯೋತ್ಸವ: ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ

ಕಾರ್ಕಳದಲ್ಲಿ ಕನ್ನಡ ರಾಜ್ಯೋತ್ಸವ: ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ

ಕಾರ್ಕಳ: 69ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಕಾರ್ಕಳ ಅನಂತಶಯನ ವೃತ್ತದ ಬಳಿ ತಾಯಿ ಭುವನೇಶ್ವರಿಗೆ ಕಾರ್ಕಳ ತಾಲೂಕು ದಂಡಾಧಿಕಾರಿ ಪುಷ್ಪಾರ್ಚನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಕಾರ್ಕಳ ಪುರಸಭೆ ಮುಖ್ಯ ಅಧಿಕಾರಿ ರೂಪ ಶೆಟ್ಟಿ ಉಪಸ್ಥಿತರಿದ್ದು. ನಂತರ ಶಾಲಾ ಮಕ್ಕಳಿಂದ ಪಥಸಂಚಲನ ದ ಜೊತೆಗೆ ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಮೆರವಣಿಗೆ ಮೂಲಕ ಕಾರ್ಕಳ ಮುಖ್ಯ ರಸ್ತೆಯಿಂದ ಗಾಂಧಿ ಮೈದಾನದವರೆಗೆ ಸಾಗಿ ಬಂತು. ಕಾರ್ಕಳ ತಾಲೂಕು ದಂಡಾಧಿಕಾರಿ ಪ್ರತಿಮಾ ರವರು ಧ್ವಜಾರೋಹಣ ಮಾಡಿ ಮಾತನಾಡಿದ ಅವರು 69 ವರ್ಷಗಳ ಹಿಂದೆ ಹರಿದುಹೋದ ಮೈಸೂರು ರಾಜ್ಯವನ್ನು ಒಂದಾಗಿಸುವಲ್ಲಿ ಅನೇಕ ಮಹನೀಯರು ಶ್ರಮಿಸಿದ್ದಾರೆ. ಅವರಿಗೆ ಈ ಶುಭ ಸಂದರ್ಭದಲ್ಲಿ ನೆನಪಿಸುವುದು ನಮ್ಮ ಕರ್ತವ್ಯವಾಗಿದೆ. ನಾವು ಈ ಕರ್ನಾಟಕದ ಮಣ್ಣಿನಲ್ಲಿ ಹುಟ್ಟಿರುವುದೇ ನಮ್ಮ ಭಾಗ್ಯವೆಂದು ಹೇಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಯೋಗೀಶ್ ದೇವಾಡಿಗ,ಅರವಿಂದ ಕಲಗಜ್ಜಿ, ಪುರಸಭಾ ಮುಖ್ಯ ಅಧಿಕಾರಿ ರೂಪ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular