ಉಡುಪಿ: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ದ ಸಹಯೋಗದಲ್ಲಿ ಕಥೆ ಕೇಳೋಣ ಸರಣಿ ಕಾರ್ಯಕ್ರಮದ 20ನೇ ಸಂಚಿಕೆಯು ಇಂದು ಸಂಜೆ 4.30ಕ್ಕೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ ಸಾಹಿತಿ ಮತ್ತು ನಿವೃತ್ತ ಮುಖ್ಯೋಪಾಧ್ಯಾಯರಾದ ಸಾವಿತ್ರಿ ಮನೋಹರ್ ಕಾರ್ಕಳ ತಮ್ಮ ಸ್ವರಚಿತ ಕಥೆಯನ್ನು ವಾಚಿಸಲಿದ್ದಾರೆ. ಸೆಪ್ಟೆಂಬರ್ 18 ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು.