ಕಾಸರಗೋಡು: ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ (ರಿ.) ಕಾಸರಗೋಡು ಘಟಕ ಮತ್ತು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಹಾಗೂ ವಿಸ್ಡಮ್ ಇನ್ಸ್‌ಟಿಟ್ಯೂಶನ್ಸ್ ನೆಟ್ವರ್ಕ್ (ಶಿಕ್ಷಣ ಸಹಕಾರಿ ಸಂಸ್ಥೆ) ಕಾಸರಗೋಡು ಸಹಯೋಗದಲ್ಲಿ ಕೇರಳ, ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ ಮತ್ತು ಸಂಸ್ಕೃತಿ ಸಮ್ಮೇಳನ-2024 ನಡೆಯಲಿದೆ. ಸೆ.15ರಂದು ಭಾನುವಾರ ಕಾಸರಗೋಡು, ನುಳ್ಳಿಪಾಡಿ ಶ್ರೀ ಧೂಮಾವತಿ ದೈವಸ್ಥಾನದ ಬಳಿಯ ಕನ್ನಡ ಭವನ ಗ್ರಂಥಾಲಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಹಿರಿಯ ಕವಿ, ಸಾಹಿತಿ, ಶಿಕ್ಷಣ ತಜ್ಞ, ವಿಶ್ರಾಂತ ಅಧ್ಯಾಪಕರಾದ ವಿ.ಬಿ. ಕುಳವರ್ಮ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.


