ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ನಮ್ಮ ಸಾಧಕರೊಂದಿಗೆ ಸಂಭ್ರಮ ಎಂಬ ಆಪ್ತ ಕಾರ್ಯಕ್ರಮ ನಗರದ ಶಾರದಾ ವಿದ್ಯಾಲಯದಲ್ಲಿ ಜರುಗಿತು. ಘಟಕದ ಸದಸ್ಯ , ಕನ್ನಡ ತುಳು ಸಾಹಿತಿ , ಪೊಳಲಿ ಶೀನಪ್ಪ ಹೆಗ್ಡೆ ಪ್ರಶಸ್ತಿ ಪುರಸ್ಕೃತ ಬೆನೆಟ್ ಜಿ. ಅಮ್ಮನ್ನ ಮತ್ತು ಘಟಕದ ಗೌರವ ಕಾರ್ಯದರ್ಶಿ , ಕ ಸಾ ಪ ಕೇಂದ್ರ ಮಾರ್ಗದರ್ಶಿ ಸಮಿತಿಯ ಪದಾಧಿಕಾರಿ , ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪುರಸ್ಕೃತ ( ಗೃಹ ರಕ್ಷಕ ದಳ ಸಮಾದೇಷ್ಟರಾಗಿ ಸೇವೆ ) ಅಲ್ಲದೆ ಇದೀಗ ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶೀ ರಾಯಭಾರಿಯಾಗಿ ನಿಯೋಜಿತರಾಗಿರುವ ಡಾ. ಮುರಲೀಮೋಹನ್ ಚೂಂತಾರು ಅವರನ್ನು ಆತ್ಮೀಯವಾಗಿ ಅಭಿನಂದಿಸಿ ಸಮ್ಮಾನಿಸಲಾಯಿತು. ಚೂಂತಾರು ಅವರ, ಕ ಸಾ ಪ ಅಧ್ಯಕ್ಷ ನಾಡೋಜ ಮಹೇಶ್ ಜೋಶಿಯವರೊಂದಿಗಿನ ವಿದೇಶ ಪ್ರವಾಸ , ಅಲ್ಲಿನ ಕನ್ನಡ ಸಂಘಗಳಿಗೆ ಭೇಟಿ ಮತ್ತು ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಇಂಚರ ತಂಡದ ಗಾಯಕಿಯರಾದ ರತ್ನಾವತಿ ಜೆ. ಬೈಕಾಡಿ , ಗೀತಾ ಮಲ್ಯ , ಜಯಲಕ್ಷ್ಮೀ ಬಾಲಕೃಷ್ಣ , ಜಯಶ್ರೀ , ಉಮಾ ಫಾಲಾಕ್ಷಪ್ಪ ಸಮೂಹ ಗಾಯನದಲ್ಲಿ ಮತ್ತು ಪ್ರತೀಕ್ಷಾ ಭಟ್ ಕೋಂಬ್ರಾಜೆ , ಪುಟಾಣಿ ಸಹಸ್ರ ಕೋಂಬ್ರಾಜೆ , ಮುರಳೀಧರ ಭಾರದ್ವಾಜ್ , ಉಷಾ ಜಿ. ಪ್ರಸಾದ್ ಕನ್ನಡ ಹಾಡುಗಳ ಪ್ರಸ್ತುತಿ ಸಭಾಸದರ ಮುಕ್ತ ಕಂಠದ ಪ್ರಶಂಸೆಗೆ ಪಾತ್ರವಾಯಿತು. ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ ಅವರ ಕಾವ್ಯ ವಾಚನ ನೆರೆದವರ ಮನಸೂರೆಗೊಂಡಿತು. ಸಂಮಾನಿತರಿಬ್ಬರೂ ಇದು ನಮ್ಮ ಮನೆಯಲ್ಲೇ ದೊರೆತ ಸಂಮಾನ , ಪ್ರೀತಿಯಿಂದ ಸ್ವೀಕರಿಸಿದ್ದೇವೆ , ಪರಿಷತ್ತಿನ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸೋಣ , ಇಂತಹ ಗೀತ ಗಾಯನ ವ್ಯಾಪಕವಾಗಬೇಕಿದೆ ಎಂದು ನುಡಿದರು.
ಘಟಕದ ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆವಹಿಸಿ ಅಭಿನಂದನೆಯ ಮಾತುಗಳನ್ನಾಡಿದರು ಕ ಸಾ ಪ ಜಿಲ್ಲಾ ಸಮಿತಿಯ ಸನತ್ ಕುಮಾರ್ ಜೈನ್ , ಘಟಕದ ಸದಸ್ಯ ಬಿ. ಕೆ. ನಾಯ್ಕ್ , ರವೀಂದ್ರನಾಥ್ , ನಿಜಗುಣ ದೊಡ್ಡಮನಿ , ಅನುಜ್, ಡಾ ರಾಜಶ್ರೀ ಮೋಹನ್ ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಘಟಕದ ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಸ್ವಾಗತಿಸಿ ಪ್ರಸ್ತಾವಿಸಿದರು. ಗೌರವ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ನಿರೂಪಿಸಿ ವಂದಿಸಿದರು.