ಕೊಡಗು: ಇತ್ತೀಚಿನ ದಿನಗಳಲ್ಲಿ ಭಾರತೀಯ ಮೂಲದ ಅನೇಕರು ವಿವಿಧ ದೇಶಗಳ ಆಡಳಿತ ಸ್ಥಾನಗಳನ್ನು ಅಲಂಕರಿಸುತ್ತಿರುವುದನ್ನು ನಾವು ಕಾಣಬಹುದು. ಏನಿಲ್ಲದಿದ್ದರೂ 8ರಿಂದ 10 ದೇಶದ ನಾಯಕರು ಭಾರತೀಯ ಮೂಲ ಹೊಂದಿರುವವರು.
ಇದೀಗ ಕೊಡಗು ಮೂಲದ ಮಹಿಳೆಯೊಬ್ಬರು ಇಂದು ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಕೊಡಗಿನ ಚರಿಷ್ಮಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅವರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪ್ರಮಾಣ ವಚನ ಇನ್ನೂ ವಿಶೇಷವಾಗಿತ್ತು. ಮೂಲತಃ ನಾಪೋಕ್ಲು ವಿಭಾಗದ ಕಲಿಯಂಡ ಚರಿಷ್ಮಾ ಆಸ್ಟ್ರೇಲಿಯಾದ ಲಿವರ್ ಪೂಲ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಸದಸ್ಯೆಯಾಗಿ ಆಯ್ಕೆಗೊಂಡಿದ್ದಾರೆ.
ಈ ಮೂಲಕ ಆಸ್ಟ್ರೇಲಿಯಾದ ರಾಜಕೀಯದಲ್ಲಿ ಚರಿಷ್ಮಾ ಮಾದಪ್ಪ ಗುರುತಿಸಿಕೊಂಡಿದ್ದಾರೆ.