ಕಾಂತಾವರ : ಶ್ರೀ ಕ್ಷೇತ್ರ ಕೇಪ್ಲಾಜೆ ಶ್ರೀ ಮಹಾಮ್ಮಾಯಿ ದೇವಿಗುಡಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವವು ಜರಗಿದ್ದು, 108 ದಿನಗಳ ಬಳಿಕ ಸೆಪ್ಟೆಂಬರ್ 5 ರಂದು ಸಾನಿಧ್ಯ ಧೃಡಕಲಶಾಭಿಷೇಕ ಜರಗಿತು.
ಇದೆ ಸಂದರ್ಭದಲ್ಲಿ ಜೀರ್ಣೋದ್ಧಾರ ಸಂದರ್ಭದಲ್ಲಿ ಶ್ರಮದಾನದಲ್ಲಿ ಪಾಲ್ಗೊಂಡ ಸಂಘ ಸಂಸ್ಥೆಗಳು, ವಿಶೇಷವಾಗಿ ಸಹಕಾರ ನೀಡಿದ ಭಕ್ತಾದಿಗಳಿಗೆ ಹಾಗೂ ಬ್ರಹ್ಮಕಲಶೋತ್ಸವ ವಿವಿಧ ಸಮಿತಿಯಲ್ಲಿ ಜವಾಬ್ದಾರಿ ನಿಭಾಯಿಸಿದವರಿಗೆ ಅಭಿನಂದಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನದಾಸ ಅಡ್ಯಂತಾಯರವರ ಅಧ್ಯಕ್ಷತೆಯಲ್ಲಿ ಜರಗಿದಅಭಿನಂದನಾ ಕಾರ್ಯಕ್ರಮದಲ್ಲಿ ಜಯಂತಿ ವಿ.ಕೆ ಪ್ರಾರ್ಥನೆಗೈದರು. ಜೀರ್ಣೋದ್ಧಾರದ ಲೆಕ್ಕ ಪತ್ರವನ್ನು ಅಕ್ಷಯ್ ಕೇಪ್ಲಾಜೆ ವಾಚಿಸಿದರು.
ಶ್ರೀ ಕಾಂತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಕೃಷ್ಣಮೂರ್ತಿ ಭಟ್, ಶ್ರೀ ಕ್ಷೇತ್ರ ಕೇಪ್ಲಾಜೆಯ ಅರ್ಚಕ ಗಣೇಶ್ ಕೇಪ್ಲಾಜೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೇಲಾಡಿ ಬಾವ ಅಶೋಕಾನಂದ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನಕಾರ್ಯದರ್ಶಿ ಪ್ರಶಾಂತ್ ಕುಮಾರ್ ಪಾಲಡ್ಕ, ಪ್ರಮುಖರಾದ ಎಂ.ಸಂಜೀವ ಕೋಟ್ಯಾನ್ ಮಿತ್ತಲಚ್ಚಿಲು, ಪದ್ಮನಾಭ ಅಮೀನ್ ಕಡೆಕಾರು ಇವರ ಉಪಸ್ಥಿತರಿದ್ದರು.
ನಂತರ ವಿಠಲ್ ನಾಯಕ್ ಪುತ್ತೂರು ಇವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಜರಗಿತು.
ಪ್ರಭಾಕರ ಕುಲಾಲ್ ಬೇಲಾಡಿ ಪ್ರಸ್ತಾಪಿಸಿ ಧನ್ಯವಿತ್ತರು. ಸುಕೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.