Sunday, July 21, 2024
Homeಸಿನಿಮಾ`ಕಾಂತಾರ-1’ ಡಿಜಿಟಲ್ ಹಕ್ಕು ಕೋಟಿ ಕೋಟಿಗೆ ಖರೀದಿ: ಖರೀದಿಸಿದವರು ಯಾರು ಗೊತ್ತಾ?

`ಕಾಂತಾರ-1’ ಡಿಜಿಟಲ್ ಹಕ್ಕು ಕೋಟಿ ಕೋಟಿಗೆ ಖರೀದಿ: ಖರೀದಿಸಿದವರು ಯಾರು ಗೊತ್ತಾ?

ಬೆಂಗಳೂರು: ನಟ ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರ 2022ರಲ್ಲಿ ಸೂಪರ್ ಹಿಟ್ ಆಗಿ, ಹಲವು ಭಾಷೆಗಳಿಗೆ ಡಬ್ ಆಗಿ ಭಾರತೀಯ ಚಿತ್ರರಂಗದ ಗಮನ ಸೆಳೆದಿತ್ತು. ಸಿನೆಮಾದ ನಿರೀಕ್ಷೆಗೂ ಯಶಸ್ಸಿನ ಬಳಿಕ ಇದೀಗ ಅದರ ಪ್ರೀಕ್ವೆಲ್ ಇನ್ನಷ್ಟು ಕುತೂಹಲ ಮೂಡಿಸಿದೆ.

20 ಕೋಟಿ ವೆಚ್ಚದಲ್ಲಿ ಕಾಂತಾರ ನಿರ್ಮಾಣಗೊಂಡು, 400 ಕೋಟಿಗೂ ಹೆಚ್ಚಿನ ಗಳಿಕೆ ಕಂಡಿತ್ತು. ಇದೀಗ `ಕಾಂತಾರ ಚಾಪ್ಟರ್ – 1’ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿದೆ. ಕುಂದಾಪುರದ ಹಳ್ಳಿಯೊಂದರಲ್ಲಿ ದೊಡ್ಡ ಸೆಟ್ ಗಳನ್ನು ಹಾಕಲಾಗಿದ್ದು, ಚಿತ್ರೀಕರಣ ಆರಂಭಕ್ಕೆ ದಿನಗಣನೆ ಶುರುವಾಗಿದೆ.

ಈ ನಡುವೆ ಈಗ ಕಾಂತಾರ ಪ್ರೀಕ್ವೆಲ್ ನ ಡಿಜಿಟಲ್ ಸ್ಟ್ರೀಮ್ ಬಗ್ಗೆ ಸುದ್ದಿಯಾಗಿದೆ. ಅಮೆಜಾನ್ ಪ್ರೈಮ್ ಸಿನೆಮಾದ ಡಿಜಿಟಲ್ ಹಕ್ಕನ್ನು ಖರೀದಿಸಿದೆ. ಕಾಂತಾರ ಪ್ರೀಕ್ವೆಲ್ ನ ಪೋಸ್ಟ್ ಥಿಯೇಟ್ರಿಕಲ್ ಡಿಜಿಟಲ್ ರೈಟ್ಸ್ ಬರೋಬ್ಬರಿ 125 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ವರದಿಯೊಂದು ತಿಳಿಸಿದೆ.

ಕಾಂತಾರ-1 ಬಿಗ್ ಬಜೆಟ್ ಸಿನೆಮಾ ಅಲ್ಲ. ಆದರೆ ಇದೊಂದು ಹೈ ಕಾನ್ಸೆಪ್ಟ್ ಚಿತ್ರ ಎನ್ನಲಾಗಿದೆ. ಕಾಂತಾರ – 1 ಈ ವರ್ಷವೇ ಬಿಡುಗಡೆಯಾಗುವ ಸಾಧ್ಯತೆಯಿದೆ.

RELATED ARTICLES
- Advertisment -
Google search engine

Most Popular