ಕಾಂತಾವರ : ನಿವೃತ್ತ ಶಿಕ್ಷಕ ಪ್ರಕಾಶ್ ಎ‌‌‌.ಕೊಟ್ಯಾನ್ ಅಭಿನಂದನಾ ಸಮಾರಂಭ‌

0
17

ಶ್ರೀ ಕಾಂತೇಶ್ವರ ವಿದ್ಯಾವರ್ಧಕ ಸಂಘ ಕಾಂತಾವರ ಶ್ರೀ ಕಾಂತೇಶ್ವರ ಪ್ರೌಢಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸುಮಾರು 28 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತಿಗೊಳ್ಳುತ್ತಿರುವ ಶ್ರೀ ಪ್ರಕಾಶ್ ಎ.ಕೋಟ್ಯಾನ್ ಇವರಿಗೆ ಅಭಿನಂದನಾ ಸಮಾರಂಭವು ಶಾಲೆಯ ಸಭಾಂಗಣದಲ್ಲಿ ಫೆ.4ರಂದು ಜರಗಿತು.

ಶ್ರೀ ಕಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಬಾರಾಡಿಬೀಡು ಡಾ.ಜೀವಂಧರ್ ಬಲ್ಲಾಳ್ ರವರ ಅಧ್ಯಕ್ಷತೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಶ್ರೀ ಕಾಂತೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸುಧಾಕರ ಶೆಟ್ಟಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ಅತಿಥಿಗಳನ್ನು ಸ್ವಾಗತಿಸಿದರು.

ಶ್ರೀಮತಿ ಆಶಾ ಪ್ರಕಾಶ್ ಕೋಟ್ಯಾನ್, ಶ್ರೀ ಕಾಂತೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ರಘುನಾಥ ಶೆಟ್ಟಿ, ಶ್ರೀ ಕಾಂತೇಶ್ವರ ಪ್ರೌಢಶಾಲೆ ಸಂಚಾಲಕ ರಂಜಿತ್ ಶೆಟ್ಟಿ , ಶ್ರೀ ಕಾಂತೇಶ್ವರ ವಿದ್ಯಾವರ್ಧಕ ಸಂಘದ ಸದಸ್ಯರಾದ ಜಯೇಶ್ ಬಲ್ಲಾಳ್, ಶ್ರೀಪತಿ ರಾವ್, ಧರ್ಮರಾಜ ಕಂಬಳಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಶ್ರೀಮತಿ ರೇಶ್ಮಾ, ಶಾಲಾ ಶಿಕ್ಷಕ ವೃಂದದ ರೇಖಾ, ರಮ್ಯ , ಭವಾನಿ, ರಾಜೇಶ್ ಭಟ್, ಶಾಲಾ ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.

ಶ್ರೀಮತಿ ರೇಖಾ ಕಾರ್ಯಕ್ರಮ ನಿರೂಪಿಸಿದರು‌. ರಾಜೇಶ್ ಭಟ್ ಧನ್ಯವಾದವಿತ್ತರು

LEAVE A REPLY

Please enter your comment!
Please enter your name here