ಕಾಪು: ಶ್ರೀ ಕ್ಷೇತ್ರ ಕಾಪು ಹೊಸ ಮಾರಿಗುಡಿ ಫೆ. 25 ರಿಂದ ಮಾರ್ಚ್ 05 ರ ವರೆಗೆ ಬ್ರಹ್ಮಕಲಶೋತ್ಸವ ಜರುಗಲಿದೆ. ಮಾರ್ಚ್ 02 ಗದ್ದುಗೆ ಪ್ರತಿಷ್ಠೆ, ಮಾರ್ಚ್ 05 ಬ್ರಹ್ಮಕಲಶೋತ್ಸವ ನಡೆಯಲಿದೆ.
ಉಚ್ಚಂಗೀ ಸಹಿತ ಕಾಪು ಸಾವಿರ ಸೀಮೆಯ ಒಡತಿ ಶ್ರೀ ಮಾರಿಯಮ್ಮನ ಪುನಃ ಪ್ರತಿಷ್ಠಾ ಪನಾಪೂರ್ವಕ ಸಹಸ್ರಕುಂಭಾಭಿಷೇಕವನ್ನು ಕೊರಂಗ್ರಪಾಡಿ ವೇ। ಮೂ। ಶ್ರೀ ಕೆ. ಜಿ. ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ಜ್ಯೋತಿಷ್ಯವಿದ್ವಾನ್ ಶ್ರೀ ಕೆ. ಪಿ. ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಅರ್ಚಕರಾದ ವೇ। ಮೂ। ಕಲ್ಯ ಶ್ರೀ ಶ್ರೀನಿವಾಸ ತಂತ್ರಿಗಳ ಸಹಯೋಗದೊಂದಿಗೆ ನೆರವೇರಲಿದೆ. ಫೆ. 25 ರಿಂದ 5 ವರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.