ಕಾಪು: ಇನ್ನಂಜೆ ನಿವಾಸಿ ಪ್ರಶಾಂತ್ (44) ಅವರು ಸೋಮವಾರ ಎದೆನೋವು ಕಾಣಿಸಿಕೊಂಡು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ.
ವಿಪರೀತ ಮದ್ಯ ಸೇವನೆ ಅಭ್ಯಾಸ ಹೊಂದಿದ್ದ ಅವರು ಮದ್ಯಸೇವನೆಯನ್ನು ಬಿಡಲು 3 ವರ್ಷಗಳ ಹಿಂದೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಒಂದು ವಾರದ ಹಿಂದೆ ಕಾಲು ಊತ ಕಾಣಿಸಿಕೊಂಡಿದ್ದರಿಂದ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಸೋಮವಾರ ಮನೆಯಲ್ಲಿರುವಾಗ ಹಠಾತ್ ಎದೆನೋವು ಕಾಣಿಸಿ ಕೊಂಡಿದ್ದು ಉಸಿರಾಡಲು ಕಷ್ಟಪಡುತ್ತಿದ್ದು ದೇಹದಲ್ಲಿ ಯಾವುದೇ ಚಲನೆ ಇಲ್ಲದೆ ಮಲಗಿದ್ದವರನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದರು. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.