Wednesday, February 19, 2025
Homeಕಾಪುಕಾಪು ಪುರಸಭೆಯಲ್ಲಿ ಆಪರೇಶನ್‌ ಕಮಲ | ಬೆಳಿಗ್ಗೆ SDPIನಿಂದ ಬಿಜೆಪಿ ಸೇರಿದ್ದ ಸರಿತಾ ಶಿವಾನಂದ್‌ ಮಧ್ಯಾಹ್ನ...

ಕಾಪು ಪುರಸಭೆಯಲ್ಲಿ ಆಪರೇಶನ್‌ ಕಮಲ | ಬೆಳಿಗ್ಗೆ SDPIನಿಂದ ಬಿಜೆಪಿ ಸೇರಿದ್ದ ಸರಿತಾ ಶಿವಾನಂದ್‌ ಮಧ್ಯಾಹ್ನ ಉಪಾಧ್ಯಕ್ಷೆ!

ಉಡುಪಿ: ಕಾಪು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಆಪರೇಷನ್ ಕಮಲ ನಡೆದಿದೆ. ಬೆಳಿಗ್ಗೆ ಎಸ್‌ಡಿಪಿಐನಿಂದ ಬಿಜೆಪಿಗೆ ಸೇರಿದ್ದ ಸರಿತಾ ಶಿವಾನಂದ್ ಮಧ್ಯಾಹ್ನ ಉಪಾಧ್ಯಕ್ಷೆಯಾಗಿದ್ದಾರೆ. ಕಾಪು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸರಿತಾ ಶಿವಾನಂದ್ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದರು. ಮಧ್ಯಾಹ್ನದ ವೇಳೆಗೆ ಸರಿತಾ ಶಿವಾನಂದ್‌ ಪುರಸಭೆಯ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿ ಕುತೂಹಲ ಮೂಡಿಸಿದ್ದಾರೆ.
ಕಾಪು ಬಿಜೆಪಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಮ್ಮುಖದಲ್ಲಿ ಸರಿತಾ ಶಿವಾನಂದ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅಧ್ಯಕ್ಷ /ಉಪಾಧ್ಯಕ್ಷ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಗೆ ಉಪಾಧ್ಯಕ್ಷ ಸ್ಥಾನ ಬಂದಿತ್ತು. 12 ಸದಸ್ಯ ಬಲದ ಬಿಜೆಪಿಯಲ್ಲಿ ಪರಿಶಿಷ್ಟ ಜಾತಿಯ ಸದಸ್ಯರು ಇರಲಿಲ್ಲ. ಕಾಂಗ್ರೆಸ್ ಪಕ್ಷ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿತ್ತು. ಚುನಾವಣೆ ನಡೆಯುವ ಕೆಲವೇ ಗಂಟೆಗಳ ಮೊದಲು SDPI ಸದಸ್ಯೆ ಸರಿತಾ ಶಿವಾನಂದ್ ಬಿಜೆಪಿ ಸೇರ್ಪಡೆಯಾಗುವ ಮೂಲಕ, ಕಾಂಗ್ರೆಸ್‌ ಆಸೆಗೆ ತಣ್ಣೀರೆರೆಚಿದ್ದಾರೆ. ಅಧ್ಯಕ್ಷೆಯಾಗಿ ಬಿಜೆಪಿಯ ಹರಿಣಾಕ್ಷಿ, ಉಪಾಧ್ಯಕ್ಷೆಯಾಗಿ ಸರಿತಾ ಶಿವಾನಂದ ಆಯ್ಕೆಯಾಗಿದ್ದಾರೆ.

RELATED ARTICLES
- Advertisment -
Google search engine

Most Popular