ಕಾಪು :ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಕಾಪು ಸಾವಿರ ಸೀಮೆಯ ಒಡತಿ ಶ್ರೀ ಮಾರಿಯಮ್ಮ ಸಹಿತವಾಗಿ ಉಚ್ಚಂಗಿ ದೇವಿಗೆ ಪ್ರತಿಷ್ಠಾದಿ ಬ್ರಹ್ಮಕಲಶೋತ್ಸವವು ಫೆಬ್ರವರಿ 25 ರಿಂದ ಮೊದಲ್ಗೊಂಡು ಮಾರ್ಚ್ 5 ರವರೆಗೆ ನವ ದಿನಗಳ ಪರ್ಯಂತ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.
ಫೆಬ್ರವರಿ 4ರಂದು ಭಕ್ತರು ಬರೆದು ಅರ್ಪಿಸಿದ ನವದುರ್ಗಾ ಲೇಖನ ಯಜ್ಞದ ಪುಸ್ತಕಗಳಿಗೆ ಪೂಜೆ ಹಾಗೂ ನವಚಂಡೀಯಾಗ ನೆರವೇರಲಿದೆ.ಫೆಬ್ರವರಿ 9ರಂದು ಸ್ವರ್ಣ ಗದ್ದುಗೆ, ರಜತ ರಥ ಹಾಗೂ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ಸ್ವರ್ಣಮುಖ ಸಾಯಂಕಾಲ ಗಂಟೆ 3.30ಕ್ಕೆ ಸರಿಯಾಗೆ ಉಳಿಯಾರಗೋಳಿ ದಂಡತೀರ್ಥ ಮಠದಿಂದ ಅದ್ದೂರಿ ಮೆರವಣಿಗೆಯಲ್ಲಿ ಸನ್ನಿದಿಗೆ ಆಗಮನ.
ಫೆಬ್ರವರಿ 22 ಮತ್ತು 23 ರಂದು ಸಾಯಂಕಾಲ ಗಂಟೆ 3ಕ್ಕೆ ಸರಿಯಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಗ್ರಾಮಗಳಿಂದ ಬೃಹತ್ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ನಡೆಯಲಿದೆ.
ಫೆಬ್ರವರಿ 25 ಕ್ಕೆ ಮೊದಲ್ಗೊಂಡು ಮಾರ್ಚ್ 5ರ ವರೆಗೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾರ್ಚ್ 2ರಂದು ಗದ್ದುಗೆ ಪ್ರತಿಷ್ಠೆ ಹಾಗೂ ಮಾರ್ಚ್ 5ರಂದು ಬ್ರಹ್ಮಕಲಶೋತ್ಸವ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯಲಿರುವ ಅಮ್ಮನ ದೇಗುಲ ಲೋಕಾರ್ಪಣೆಯಾಗಲಿದೆ.