Monday, January 20, 2025
Homeಮುಲ್ಕಿಪಡುಪಣಂಬೂರಿನ ಹೊಯ್ಗೆ ಗುಡ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕರಸೇವೆ

ಪಡುಪಣಂಬೂರಿನ ಹೊಯ್ಗೆ ಗುಡ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕರಸೇವೆ

ನಿಮ್ಮ ಸೇವೆ ಅನನ್ಯ: ಹೆಚ್.ರಂಗನಾಥ ಭಟ್

ಮುಲ್ಕಿ: ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಗ್ರಾಮ ಪಂಚಾಯತ್ ಪಡುಪಣಂಬೂರು ಮಾರ್ಗದರ್ಶನದಲ್ಲಿ ಜಿಲ್ಲಾ, ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ ಡಿ.29ರಂದು ಬೆಳಗ್ಗೆ 7 ಗಂಟೆಯಿಂದ 9ಗಂಟೆಯವರೆಗೆ ಪಡುಪಣಂಬೂರಿನ ಹೊಯ್ಗೆ ಗುಡ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಇದರ ಜೀರ್ಣೋದ್ದಾರದ ಪ್ರಯುಕ್ತ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ಮತ್ತು ಸದಸ್ಯೆಯರಿಂದ ಕರ ಸೇವೆ ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ಪ್ರಧಾನ ಅರ್ಚಕರಾದ ಶ್ರೀ ಹೆಚ್ ರಂಗನಾಥ ಭಟ್ ಮಾತನಾಡಿ, ದೇವರ ಕೆಲಸ ಮೆಚ್ಚುವ ಕೆಲಸ ಈ ನಿಟ್ಟಿನಲ್ಲಿ ನಿಮ್ಮ ಸೇವೆ ಅನನ್ಯ ಮುಂದೆ ನಡೆಯಲಿರುವ ಬ್ರಹ್ಮಕಲಶದ ಸಂದರ್ಭದಲ್ಲಿ ನಿಮ್ಮ ಸಂಸ್ಥೆಯ ಸಹಕಾರದ ಅಗತ್ಯತೆ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಹೊರಾಂಗಣದಲ್ಲಿದ್ದ ಹುಲ್ಲು ತೆಗೆದು ಶಿಲೆ ಕಲ್ಲುಗಳನ್ನು ಸ್ಥಳಾಂತರಿಸಿ ಕಲ್ಲಿನ ಹುಡಿಗಳನ್ನು ಗುಡಿಸಿ, ಒಳಾಂಗಣದಲ್ಲಿ ಇದ್ದ ಮರದ ವಸ್ತುಗಳನ್ನು ತೆಗೆದು ಗುಡಿಸಿ ಸ್ವಚ್ಛಗೊಳಿಸಲಾಯಿತು. ಕರ ಸೇವೆಯನ್ನು ಸ್ವಚ್ಛ ಭಾರತ ಅಭಿಯಾನ ಹಾಗೂ ಶ್ರಮದಾನ ಶೀರ್ಷಿಕೆಯಡಿಯಲ್ಲಿ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರು, ಪ್ರಶಾಂತ್ ಕುಮಾರ್ ಬೇಕಲ್, ಅಧ್ಯಕ್ಷರು ದೀಪಕ್ ಸುವರ್ಣ, ಉಪಾಧ್ಯಕ್ಷರು ಹಾಗೂ ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್, ಕೋಶಾಧಿಕಾರಿ ಸುನಿಲ್ ಜಿ. ದೇವಾಡಿಗ, ಕಾರ್ಯಾಧ್ಯಕ್ಷ ಸಂತೋಷ್ ದೇವಾಡಿಗ, ಪರಿಸರ ಸಂರಕ್ಷಣಾ ಕಾರ್ಯದರ್ಶಿ ಶ್ರೀ ಚಂದ್ರ ಶೇಖರ ದೇವಾಡಿಗ, ಸದಸ್ಯರಾದ ಪ್ರಮೋದ್ ಕುಮಾರ್ ಆಚಾರ್ಯ, ಜಗದೀಶ್ ಕುಲಾಲ್,ಶ್ರೀ ಧರ್ಮಾನಂದ ಶೆಟ್ಟಿಗಾರ್, ಗೌತಮ್ ಬೆಲ್ಚಡ, ಪಾಂಡುರಂಗ, ದಯಾನಂದ ಕೋಟ್ಯಾನ್, ರಮೇಶ್ ಕರ್ಕೇರ, ಪದ್ಮನಾಭ ಕುಲಾಲ್, ಬಾಲಕೃಷ್ಣ ಲೈಟ್ ಹೌಸ್, ಜಯಂತ್ ಕುಂದರ್ ಸಂಕಲಕರಿಯ, ಗಣೇಶ್ ಆಚಾರ್ಯ, ಚಂದ್ರ ಸುವರ್ಣ, ಮಹಿಳಾ ಕಾರ್ಯಕಾರಿ ಸಮಿತಿ ಕಾರ್ಯಾಧ್ಯಕ್ಷೆ ಯಶೋಧ ದೇವಾಡಿಗ ಸದಸ್ಯೆಯರಾದ ಸರಿತಾ ರಮೇಶ್, ಗೀತಾ ತಾರಾನಾಥ್, ಶರ್ಮಿಳಾ, ಗೀತಾ ಸುರೇಶ್, ವೀಣಾ ಪ್ರಶಾಂತ್, ಮೀನಾಕ್ಷಿ ಸುನಿಲ್, ಶೋಭಾ ಪದ್ಮನಾಭ,ಕುಮಾರಿ ಕಾವ್ಯ, ಕುಮಾರಿ ದೀಕ್ಷಾ, ಕುಮಾರಿ ಶಿವಾನಿ, ಮಾಸ್ಟರ್ ಆಯ್ಯುಷ್ ಕರ್ಕೇರ, ಮಾಸ್ಟರ್ ಶ್ರೇಯಸ್ ದೇವಾಡಿಗ ಹಾಗೂ ದೇವಸ್ಥಾನದ ಕೋಶಾಧಿಕಾರಿ ರಾಜ ಭಟ್, ರಾಮ್ ಭಟ್, ಕಾರ್ಯದರ್ಶಿ ದೇವದಾಸ್ ಸುವರ್ಣ ಶೇಡಿಕಟ್ಟ, ಆಡಳಿತ ಸಮಿತಿಯ ಸುದೇಶ್ ಪೂಜಾರಿ ಪಡುತೋಟ, ಪಡುಪಣಂಬೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮಂಜುಳಾ ಹೊಯ್ಗೆ ಗುಡ್ಡೆ, ಗೀತಾ ಗಣೇಶ್ ಹಾಗೂ ಉಮಾಮಹೇಶ್ವರ ಮಹಿಳಾ ಸಂಘದ ಸದಸ್ಯೆಯರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular