ಎಲ್ಲಿ ಭಕ್ತಿ ಇದೆಯೋ ಅಲ್ಲಿ ವಿಶೇಷ ಶಕ್ತಿ ಇದೆ – ಹಯಗ್ರೀವ ಪಡಿಲಾಯ ಭಟ್
ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಗ್ರಾಮ ಪಂಚಾಯತ್ ಪಡುಪಣಂಬೂರು ಮಾರ್ಗದರ್ಶನದಲ್ಲಿ ಜಿಲ್ಲಾ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ ದಿನಾಂಕ:25/12/2024 ರಂದು ಬುಧವಾರ ಸಮಯ ಬೆಳಿಗ್ಗೆ ಘಂಟೆ 7:00 ರಿಂದ 9:00 ರ ತನಕ ಶ್ರೀ ಕ್ಷೇತ್ರ ಹರಿಹರ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕಾರ್ನಾಡು ಇದರ ಜೀರ್ಣೋದ್ದಾರದ ಪ್ರಯುಕ್ತ ದೇವಸ್ಥಾನದಲ್ಲಿ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು ಮತ್ತು ಸದಸ್ಯೆಯರಿಂದ ಕರ ಸೇವೆ ನಡೆದು,ಶ್ರದ್ದಾ ಭಕ್ತಿಯಿಂದ ಕೆಲಸ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡರೆ ಅಲ್ಲಿ ದೇವರ ವಿಶೇಷ ಶಕ್ತಿಯು ಇರುತ್ತದೆ ಕರಸೇವೆಯಲ್ಲಿ ಪಾಲ್ಗೊಂಡ ಸರ್ವರಿಗೂ ವಿಷ್ಣುಮೂರ್ತಿ ದೇವರು ಸನ್ಮಂಗಲವನ್ನು ಕರುಣಿಸಲಿ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಹಯಗ್ರೀವ ಪಡಿಲಾಯ ಭಟ್ ಹೇಳಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಸುತ್ತು ಪೌಳಿಯ ಹಂಚುಗಳನ್ನು ತೆಗೆದು, ಒಳಾಂಗಣ ಮತ್ತು ಹೊರಾಂಗಣವನ್ನು ಗುಡಿಸಿ ಸ್ವಚ್ಛ ಗೊಳಿಸಲಾಯಿತು.ಕರ ಸೇವೆಯನ್ನು ಸ್ವಚ್ಚ ಭಾರತ ಅಭಿಯಾನ ಹಾಗೂ ಶ್ರಮದಾನ ಶೀರ್ಷಿಕೆಯಡಿಯಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರು,ಶ್ರೀ ಪ್ರಶಾಂತ್ ಕುಮಾರ್ ಬೇಕಲ್ ,ಅಧ್ಯಕ್ಷರು ಶ್ರೀ ದೀಪಕ್ ಸುವರ್ಣ,ಕೋಶಾಧಿಕಾರಿ ಶ್ರೀ ಸುನಿಲ್ ಜಿ ದೇವಾಡಿಗ ಸದಸ್ಯರಾದ ಶ್ರೀ ಯೋಗೀಶ್ ಕೋಟ್ಯಾನ್ ,ಶ್ರೀ ಶಿವ ದೇವಾಡಿಗ,ಶ್ರೀ ಪ್ರಮೋದ್ ಕುಮಾರ್ ಆಚಾರ್ಯ,ಶ್ರೀ ಸುನಿಲ್ ಕೋಟ್ಯಾನ್ ,ಶ್ರೀ ಪಾಂಡುರಂಗ , ಶ್ರೀ ದಯಾನಂದ ಕೋಟ್ಯಾನ್,ಶ್ರೀ ರಮೇಶ್ ಕರ್ಕೇರ ,ಶ್ರೀ ಪದ್ಮನಾಭ ಕುಲಾಲ್ ,ಶ್ರೀ ಬಾಲಕೃಷ್ಣ ಲೈಟ್ ಹೌಸ್ ಮಹಿಳಾ ಕಾರ್ಯಕಾರಿ ಸಮಿತಿ ಕಾರ್ಯಾಧ್ಯಕ್ಷೆ ಶ್ರೀಮತಿ ಯಶೋಧ ದೇವಾಡಿಗ, ಸದಸ್ಯೆಯರಾದ ಶ್ರೀಮತಿ ಸರಿತಾ ರಮೇಶ್ , ಶ್ರೀಮತಿ ಗೀತಾ ತಾರಾನಾಥ್,ಶ್ರೀಮತಿ ಶರ್ಮಿಳಾ, ಶ್ರೀಮತಿ ಗೀತಾ ಸುರೇಶ್ , ಮಾಸ್ಟರ್ ಆರ್ಯನ್ ,ಮಾಸ್ಟರ್ ಶ್ರೇಯಸ್ ದೇವಾಡಿಗ ,ಮಾಸ್ಟರ್ ತನುಶ್ ,ಮಾಸ್ಟರ್ ತನ್ವಿಶ್ ಹಾಗೂ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಶ್ರೀ ಸುರೇಶ್ ರಾವ್ ,ಶ್ರೀ ಪ್ರವೀಣ್ ವಿ.ಕೋಟ್ಯಾನ್,ಶ್ರೀ ಕೃಷ್ಣ ಶೆಟ್ಟಿ ,ಶ್ರೀ ಹರ್ಷರಾಜ್ ಶೆಟ್ಟಿ ,ಶ್ರೀ ಪುರಂದರ ಸಾಲ್ಯಾನ್ ,ಶ್ರೀ ಚಂದ್ರಹಾಸ ಶೆಟ್ಟಿ ಮೊದಲಾದವರು ಭಾಗವಹಿಸಿದರು.