ಬಂಟ್ವಾಳ ತಾಲ್ಲೂಕಿನ ಕಾರಿಂಜ ಕ್ಷೇತ್ರದ ಶಿವಾಲಯ ಬಳಿ ಕುಸಿತಕ್ಕೀಡಾದ ಆವರಣಗೋಡೆಯನ್ನು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಶನಿವಾರ ಭೇಟಿ ನೀಡಿ ಗರಿಷ್ಟ ಮೊತ್ತದ ಅನುದಾನ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಭರವಸೆ ನೀಡಿದರು. ಜಿಲ್ಲಾ ಸಮಿತಿ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಗ್ರಾಮ ಪಂಚಾಯಿತಿ ಸದಸ್ಯ ವೀರೇಂದ್ರ ಅಮೀನ್, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಕರುಣೇಂದ್ರ ಪೂಜಾರಿ ಮತ್ತಿತರರು ಇದ್ದರು.
ಕಾರಿಂಜ ಕ್ಷೇತ್ರ ಆವರಣ ಗೋಡೆ ಕುಸಿತ: ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಭೇಟಿ
RELATED ARTICLES