ಕಾರ್ಕಳ: ಬಜಗೋಳಿಯ ‘ಅಯ್ಯೋ ಶ್ರದ್ಧಾ’ ಯೂಟ್ಯೂಬ್ ಚಾನೆಲ್ ಪ್ರವರ್ತಕಿ ಶ್ರದ್ಧಾ ಜೈನ್ ಅವರಿಗೆ ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಿಳಾ ವಿಭಾಗದ ಸೃಜನಶೀಲ ಕ್ರಿಯೇಟರ್ ಪ್ರಶಸ್ತಿ ನೀಡಿ ಗೌರವಿಸಿದರು.
ಆರ್‌ಜೆ, ಕಂಟೆಂಟ್ ಕ್ರಿಯೇಟರ್ ಆಗಿರುವ ‘ಅಯ್ಯೋ ಶ್ರದ್ಧಾ’ ಎಂದೇ ಪ್ರಸಿದ್ಧರಾಗಿರುವ ಶ್ರದ್ಧಾ ಮಾತನಾಡಿ, ಎಷ್ಟೇ ಒತ್ತಡದ ಪರಿಸ್ಥಿತಿ ಇದ್ದರೂ ನಾವು ಭಾರತೀಯರು ನಗುವ ಮಾರ್ಗ ಕಂಡುಕೊಳ್ಳುತ್ತಲೇ ಇರುತ್ತೇವೆ ಎಂದರು.ಶ್ರದ್ಧಾ ಅವರನ್ನು ವೇದಿಕೆಗೆ ಸ್ವಾಗತಿಸುವ ವೇಳೆ ಪ್ರಧಾನಿ ಮೋದಿ ಅವರೇ ‘ಅಯ್ಯೋ…’ ಎಂದು ಹೇಳಿದ್ದು ವಿಶೇಷವಾಗಿತ್ತು.