ಕಾರ್ಕಳ, ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನ ದಲ್ಲಿ ದಿನಾಂಕ 17-09- 2024 ನೇ ಮಂಗಳವಾರ ಅನಂತ ಚತುರ್ದಶಿ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ 6.30 ರಿಂದ ವಿಷ್ಣು ಸಹಸ್ರನಾಮಾವಳಿ ಸಹಿತ ತುಳಸಿ ಅರ್ಚನೆ ಮತ್ತು ವಿಷ್ಣು ಸಹಸ್ರನಾಮ ಯಾಗ ಪ್ರಾರಂಭ. ಮಧ್ಯಾಹ್ನ 12.30 ಘಂಟೆ ಗೆ ಮಹಾಪೂಜೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮ ದ ಅಂಗವಾಗಿ ಮದ್ಯಾಹ್ನ 1.00 ಘಂಟೆ ಯಿಂದ ವಿಶಾಲ ಯಕ್ಷಗಾನ ಕಲಾ ಬಳಗ ನಂದಳಿಕೆ ಇವರಿಂದ ಯಕ್ಷಗಾನ ತಾಳ ಮದ್ದಳೆ ದಾರುಕ ಸಂಧಾನ, ಸೇವಾದಾರರು ವಿಷ್ಣು ಸೇವಾ ಸಮಿತಿ ಕಾರ್ಕಳ. ಸಂಜೆ 04-00 ಘಂಟೆ ಯಿಂದ ವೆಂಕಟೇಶ್ ಜಿ. ಸಿಪ್ಲುಕರ್ ಇವರ ನೇತೃತ್ವದಲ್ಲಿ ವಿದ್ವಾನ್ ಚಿಂತನ್ ಪಲ್ಲವಿ ಶ್ರೀನಿವಾಸ್ ವೃಂದದವರಿಂದ ಕರ್ನಾಟಕ ಸಂಗೀತ ಕಛೇರಿ ಹಾಗೂ ದಾಸರ ಪದಗಳ ಗಾಯನ, ರಾತ್ರಿ 8.30 ರಿಂದ ಪಾಂಡುರಂಗ ದೇವಾಡಿಗ ಬಳಗ ದವರಿಂದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ, ನಂತರ ಮಹಾ ಪೂಜೆ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.