ಕಾರ್ಕಳ : ಉದ್ಯಮಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ – ಮಗನ ಸಾವಿಗೆ ಸೊಸೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ದೂರು ನೀಡಿದ ಮಾವ

0
165

ಮದ್ದೆಯಾದ ಒ೦ದೇ ತಿಂಗಳಿಗೆ ನವ ವಿವಾಹಿತ ಉದ್ಯಮಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನಲ್ಲಿ ನಡೆದಿದ್ದು ಇದೀಗ ಈ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ ̤

ತಿಂಗಳ ಹಿಂದೆ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದ ಯುವ ಉದ್ಯಮಿ ಬೆಳ್ತಂಗಡಿ ನೆಲ್ಯಾಡಿ ನಿವಾಸಿ ಸುದೀಪ್ ರೈ(36) ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಇವರಿಗೆ ಫೆ.17ರಂದು ಕಾರ್ಕಳ ತಾಲೂಕಿನ ಸೌಮ್ಯ ಶೆಟ್ಟಿ ಜೊತೆ ಮದುವೆಯಾಗಿತ್ತು. ಆದರೆ ಈತನ ಸಾವಿಗೆ ಪತ್ನಿ ಸೌಮ್ಯಾ ಶೆಟ್ಟಿಯೇ ಕಾರಣ, ಆಕೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಸೊಸೆಯ ವಿರುದ್ಧವೇ ಮಾವ ದೂರು ನೀಡಿದ್ದಾರೆ.

ನಾಟಕ ಕಲಾವಿದೆ, ಮೇಕಪ್ ಆರ್ಟಿಸ್ಟ್ ಆಗಿರುವ ಸೌಮ್ಯ ಶೆಟ್ಟಿ ಅವರು ಮೂಲತಃ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ನಿವಾಸಿ. ಈ ಹಿ೦ದೆ ಒ೦ದು ಮದುವೆಯಾಗಿ ಪತಿಗೆ ಡೈವೋರ್ಸ್ ನೀಡಿದ್ದ ಸೌಮ್ಯ ಬಳಿಕ ಸುದೀಪ್ ಅವರನ್ನು ಮದುವೆಯಾಗಿದ್ದರು. ಸೌಮ್ಯ ಜೊತೆ ವಿವಾಹದ ಸುದೀಪ್ ಕುಟುಂಬದ ಆಕ್ಷೇಪವೆತ್ತಿದ್ದರು ಎನ್ನಲಾಗಿದೆ.

ಮಗನ ಸಾವಿಗೆ ಸೊಸೆ ಅತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಮಾವ ದಾಮೋದರ್ ಆರೋಪಿಸಿ ಠಾಣೆಗೆ ದೂರು ನೀಡಿದ್ದಾರೆ. ಆದರೆ ಈ ಆರೋಪವನ್ನು ಪತ್ನಿ ಸೌಮ್ಯ ನಿರಾಕರಿಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಸುದೀಪ್ ಸಾವಿಗೆ ನಾನು ಕಾರಣ ಅಲ್ಲ. ಸೋಷಿಯಲ್ ಮೀಡಿಯಾ ಮೂಲಕ ನಮ್ಮಿಬ್ಬರ ಪರಿಚಯ ಆಯ್ತು. ನನ್ನ ಪೂರ್ವಾಪರ ಎಲ್ಲಾ ಗೊತ್ತಿದ್ದು ಅವರು ನನ್ನ ಮದುವೆಯಾಗಿದ್ದರು. ಅವರು ನನ್ನ ಮನೆಯಲ್ಲೇ ಇದ್ದರು. ನಾವು ದೇವಸ್ಥಾನಕ್ಕೆ ಹೋಗಿ ಬಂದು ಮಧ್ಯಾಹ್ನದ ನಂತರ ಅವರ ಮನೆಗೆ ಹೋಗಿದ್ದಾರೆ.

ಮನೆ ತಲುಪುವವರೆಗೂ ಕಾಲ್ ನಲ್ಲಿ ಮಾತನಾಡಿದ್ದಾರೆ. ನಂತರ ಕಾಲ್ ಸಿಗ್ಲಿಲ್ಲ. ಮತ್ತೆ ಕಾಲ್ ಮಾಡಿ ಸ್ವಲ್ಪ ಪ್ರಾಬ್ಲಂ ಆಗಿದೆ ಅಂತ ಹೇಳಿ ಕಾಲ್ ಕಟ್ ಆಗಿದೆ. ಅವರಿಗೆ ಸಾಲ ಇತ್ತು. ಅದು ಮೊದಲೇ ನಂಗೆ ತಿಳಿಸಿದ್ದಾರೆ.ವಿಷ ಸೇವಿಸಿದ ನಂತರ 2 ದಿನ ಸರಿಯಾಗಿಯೇ ಇದ್ರು. ಬಳಿಕ ಫುಡ್ ಪಾಯ್ಸನ್ ಆಗಿದೆ ಎಂದು ಆಸ್ಪತ್ರೆಗೆ ದಾಖಲಿಸಿದ್ದೇನೆ. ಅವರ ಮನೆಯವರಿಗೂ ಮಾಹಿತಿ ನೀಡಿದಾಗ ಅವನ ಜೊತೆ ನೀನು ಇರಕೂಡದು.

ಅವರ ಜೊತೆ ಇನ್ನು ಮುಂದೆ ಇರಲ್ಲ ಎಂದು ಬರೆದು ಕೊಡು. ನಂತರ ನಾವು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತವೆ ಎಂದು ಹೇಳಿದ್ದಾರೆ. ಇದಕ್ಕೆ ನಾನು ಒಪ್ಪಿಲ್ಲ. ನಾನು ಅವರನ್ನು ಮದ್ದೆಯಾಗೋದು ಇಷ್ಟವಿಲ್ಲ ಅಂತ ಇದ್ರೆ ನಮಗೇ ಕಾಲ್ ಮಾಡಿ ಹೇಳಬಹುದಿತ್ತಲ್ವ. ಆತ ವಿಷ ಸೇವಿಸಿರುವ ಬಗ್ಗೆ ಸ್ವತಃ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ನಂಗೆ ನನ್ನ ಗಂಡನ ಸಾವಿಗೆ ಕಾರಣ ಏನು ಅನ್ನೋದು ಬೇಕು. ಅವರು ಸಾಯುವಂತ ಹುಡುಗ ಅಲ್ಲ: ನಂಗೆ ನ್ಯಾಯ ಬೇಕು ಎಂದು ಸೌಮ್ಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

LEAVE A REPLY

Please enter your comment!
Please enter your name here