ಕಾರ್ಕಳ:ಚೈತ್ರ ಪೌಂಡೇಶನ್ ರಿ. ಮೈಸೂರು ಇದರ 9ನೇ ವರ್ಷದ ಸಂಸ್ಥಾಪನ ದಿನದ ಪ್ರಯುಕ್ತ ಗಾನ ಭಾರತಿ ವೀಣೆ ಶೇಷಣ್ಣ ಸಭಾ ಭವನದಲ್ಲಿ 6 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು .
ಪ್ರಧಾನ ಮಂತ್ರಿಯವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಬಾಲಕಿಯ ಹೆಸರನ್ನು ಗುರುತಿಸಿಕೊಂಡಿರುವ ಕು. ಕಲ್ಪನಾ ರೈಲ್ವೆ ಪೋರ್ಟಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕದ ಪ್ರಥಮ ಮಹಿಳೆ ರಿಜ್ವಾನ ,ಕನ್ನಡ ಪ್ರೇಮಿ ಮೈಸೂರು ರಂಗನಾಥ್ ಎನ್ ಸಿಸಿ ಯಲ್ಲಿ ಕರ್ನಾಟಕದ ಪ್ರತಿನಿಧಿ ಪ್ರಮೀಳಾ ಕುನ್ವರ್, ಪರಿಸರ ಪ್ರೇಮಿ ಚಂದಾಗಾಲು ರಮೇಶ್, ವಿಜೇತ ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಈ 6 ಮಂದಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ಹಾಗೂ ನಗದು ಪುರಸ್ಕಾರದೊಂದಿಗೆ ಗೌರವಿಸಿದರು.

ಈ ಸಂದರ್ಭದಲ್ಲಿ ಚೈತ್ರ ಪೌಂಡೇಶನ್ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಗಳಾದ ಡಾ. ಸುಧಾ,ರಮೇಶ್ ದಂಪತಿಗಳು, ಹಿರಿಯ ಲೇಖಕಿ ಪದ್ಮಾ ಆನಂದ್ , ಎಸ್.ರಘು ಲೆಕ್ಕ ಪರಿಶೋಧಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.