Saturday, February 15, 2025
Homeಕಾರ್ಕಳಕಾರ್ಕಳ: ಗ್ಯಾಂಗ್‌ ರೇಪ್‌ ಪ್ರಕರಣ: ತುಳುನಾಡ ತುಡರ್ ಕೀರ್ತಿ ಕಾರ್ಕಳ ಅಸಮಾಧಾನ

ಕಾರ್ಕಳ: ಗ್ಯಾಂಗ್‌ ರೇಪ್‌ ಪ್ರಕರಣ: ತುಳುನಾಡ ತುಡರ್ ಕೀರ್ತಿ ಕಾರ್ಕಳ ಅಸಮಾಧಾನ

ಶಾಂತಿಪ್ರಿಯರಿಗೆ ಹೆಸರುವಾದಂತಹ ಕಾರ್ಕಳದ ಊರಿನಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ಆದಂತಹ ಘಟನೆ ತುಂಬಾ ಬೇಸರದ ಸಂಗತಿಯಾಗಿದೆ.
ಕಾರ್ಕಳ. ಬೋವಿ ಸಮುದಾಯದ ಯುವತಿಗೆ ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ಮಾಡಿರುವ ಕೃತ್ಯ ಅತ್ಯಂತ ಖಂಡನೀಯ. ಇದುವರೆಗೆ ಬೇರೆ ಊರಿನಲ್ಲಿ ನಡೆಯುತ್ತಿರುವಂತಹ ಅತ್ಯಾಚಾರ ಪ್ರಕರಣ ಇದೀಗ ಕಾರ್ಕಳಕ್ಕೂ ಪ್ರಸರಿಸಿದೆ. ಇದೊಂದು ಪೂರ್ವಯೋಜಿತ ಕೃತ್ಯ ಎಂದು ತಿಳಿದು ಬರುತ್ತದೆ. ಈ ಕೃತ್ಯದ ಹಿಂದೆ ಯಾರೆಲ್ಲ ಭಾಗಿಯಾಗಿದ್ದಾರೆ ಅವರನ್ನು ಅತಿ ಶೀಘ್ರದಲ್ಲಿ ಬಂಧಿಸಬೇಕು.ಇದರ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಅಪರಾಧಿಗಳನ್ನು ಅತಿ ಶೀಘ್ರದಲ್ಲಿ ಬಂಧಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ. ಹಾಗೂ ಈ ಅಮಲು ಪದಾರ್ಥ ಎಲ್ಲಿಂದ ಬರುತ್ತಿದೆ ಎಂದು ಅದನ್ನು ಯಾರು ಕೊಡುತ್ತಾರೆಂದು ಆ ಜಾಲವನ್ನು ಭೇದಿಸಿ ಅವರಿಗೆ ಕಠಿಣವಾದ ಶಿಕ್ಷೆ ವಿಧಿಸಬೇಕು. ಈ ತನಿಖೆ ಮುಗಿದು ಅಪರಾಧಿಯನ್ನು ಬಂಧಿಸುವವರೆಗೆ ಯುವತಿ ಹಾಗೂ ಅವರ ಕುಟುಂಬಕ್ಕೆ ಸೂಕ್ತವಾದ ಭದ್ರತೆ ಒದಗಿಸಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular