Monday, January 13, 2025
Homeಕಾರ್ಕಳಕಾರ್ಕಳ : ಗ್ರಾಮ ಪಂಚಾಯತ್‌ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ

ಕಾರ್ಕಳ : ಗ್ರಾಮ ಪಂಚಾಯತ್‌ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ

ಕಾರ್ಕಳ : ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳು ಕ್ಲಪ್ತ ಸಮಯದಲ್ಲಿ ಹಾಗೂ ತ್ವರಿತ ಗತಿಯಲ್ಲಿ ತಲುಪಿಸುವ ಉದ್ದೇಶದಿಂದ ಗ್ರಾಮ ಮಟ್ಟದ ಗ್ರಾಮ ಪಂಚಾಯತ್‌ ಕಛೇರಿಗಳಿಗೆ ಹೊಸ ಕಟ್ಟಡಗಳನ್ನು ಶಾಸಕರಾದ ಶ್ರೀ ವಿ ಸುನಿಲ್‌ ಕುಮಾರ್‌ರವರು ವಿವಿಧ ಅನುದಾನಗಳಿಂದ ನಿರಂತರವಾಗಿ ನೀಡುತ್ತಾ ಬಂದಿರುತ್ತಾರೆ. ಇದರಿಂದ ಕ್ಷೇತ್ರದ ಹಲವಾರು ಗ್ರಾಮ ಪಂಚಾಯತ್‌ ಕಟ್ಟಡಗಳು ನೂತನವಾಗಿ
ನಿರ್ಮಣಗೊಂಡು ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಸಮಪರ್ಕವಾಗಿ ನೀಡುತ್ತಿದೆ. ಅದರ ಮುಂದುವರೆದ ಭಾಗವಾಗಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ 2024-25ನೇ ಸಾಲಿನ ಕ್ರಿಯಾಯೋಜನೆಗೆ ಕಾರ್ಕಳದ ಕೆಲವು ಗ್ರಾಮ ಪಂಚಾಯತ್‌ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದೀಗ ಮಂಡಳಿಯ ಆದೇಶದ ಮೇರೆಗೆ ಕಾರ್ಕಳದ ನೀರೆ, ನಲ್ಲೂರು, ನಂದಳಿಕೆ ಗ್ರಾಮಗಳಲ್ಲಿ ನೂತನ ಗ್ರಾಮ ಪಂಚಾಯತ್‌ ಕಟ್ಟಡ ನಿರ್ಮಾಣಕ್ಕೆ ತಲಾ ರೂ.10.00 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಂಡಿದೆ ಎಂದು
ಶಾಸಕರ ಜನಸೇವಾ ಕಛೇರಿ ʼವಿಕಾಸʼ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES
- Advertisment -
Google search engine

Most Popular