Friday, March 21, 2025
Homeಕಾರ್ಕಳಕಾರ್ಕಳ : ಲಾರಿ, ಬೈಕ್ ಮುಖಾಮುಖಿ ಡಿಕ್ಕಿ – ಬೈಕ್ ಸವಾರರ ಸ್ಥಿತಿ ಗಂಭೀರ

ಕಾರ್ಕಳ : ಲಾರಿ, ಬೈಕ್ ಮುಖಾಮುಖಿ ಡಿಕ್ಕಿ – ಬೈಕ್ ಸವಾರರ ಸ್ಥಿತಿ ಗಂಭೀರ

ಕಾರ್ಕಳ: ಅಜೆಕಾರು –ಕೈಕಂಬ ಸರ್ಕಲ್ ಬಳಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಲಾರಿ ಹಾಗೂ ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರರಿಬ್ಬರು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಸಂಜೆ 6.30ರ ವೇಳೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರು ರಸ್ತೆಗೆಸೆಯಲ್ಪಟ್ಟು ಇಬ್ಬರ ಕೈ ಹಾಗೂ ಕಾಲುಗಳ ಮೂಳೆ ಮುರಿತಕ್ಕೊಳಗಾಗಿ ಕೋಮಾಸ್ಥಿತಿಯಲ್ಲಿ ಇದ್ದರು. ಬಿಹಾರ ಮೂಲದವರಾಗಿದ್ದು, ಅವರಲ್ಲಿ ಓರ್ವನ ಹೆಸರು ಆರಿಫ್ (20) ಎಂದು ತಿಳಿಬಂದಿದೆ.

ಈತನನ್ನು 108 ಅಂಬುಲೆನ್ಸ್ ನಲ್ಲಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 108 ಸಿಬ್ಬಂದಿ ನಾಗರಾಜ್ ಅಂಗಡಿ ಪೈಲೆಟ್ ಆಗಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಮತ್ತೊಬ್ಬ ಗಾಯಾಳುವನ್ನು ಖಾಸಗಿ ಆಸ್ಪತ್ರೆಯಲ್ಲಿ ಕರೆದೊಯ್ಯಲಾಗಿದ್ದು, ಆತನ ಹೆಸರು ತಿಳಿದುಬಂದಿಲ್ಲ. ಈ ಘಟನೆ ಅಜೆಕಾರು ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

RELATED ARTICLES
- Advertisment -
Google search engine

Most Popular