Saturday, July 20, 2024
Homeಆರೋಗ್ಯಕಾರ್ಕಳ: ಜನನದ ಒಂದು ವಾರದ ನಂತರ ತೀವ್ರ ಅಸ್ವಸ್ಥತೆಯಿಂದ ತಾಯಿ ಮೃತ್ಯು

ಕಾರ್ಕಳ: ಜನನದ ಒಂದು ವಾರದ ನಂತರ ತೀವ್ರ ಅಸ್ವಸ್ಥತೆಯಿಂದ ತಾಯಿ ಮೃತ್ಯು

ಕಾರ್ಕಳ:  ಇರ್ವತ್ತೂರು ಗ್ರಾಮದ ಸಂಪ್ರೀತಾ (34) ಇವರು ಮೇ 30 ರಂದು ತಮ್ಮ 2 ನೇ ಮಗುವಿಗೆ ಕಾರ್ಕಳದ ಟಿ.ಎಂ.ಎ. ರೋಟರಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದು, ಬಳಿಕ ಮಗುವಿನ ಜೊತೆಯಲ್ಲಿ ತಮ್ಮ ತವರು ಮನೆಯಾದ ಇರ್ವತ್ತೂರು ಗ್ರಾಮದ ಜಂಗರಬೆಟ್ಟುವಿನಲ್ಲಿದ್ದರು. ಜೂನ್ 5  ರಂದು ಸಂಜೆ 5:30 ಗಂಟೆಗೆ ಮನೆಯಲ್ಲಿದ್ದಾಗ ಅಸ್ವಸ್ಥಗೊಂಡ ಅವರನ್ನು ಅವರ  ಕಾರ್ಕಳದ ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ವಾಂತಿ ಮಾಡಿ ಪ್ರಜ್ಞಾಹೀನಗೊಂಡಿದ್ದರು.

ಅವರನ್ನು ಟಿ.ಎಂ.ಎ. ರೋಟರಿ ಆಸ್ಪತ್ರೆ, ಕಾರ್ಕಳ ಇಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 7:45 ಗಂಟೆಗೆ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 28/2024 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

RELATED ARTICLES
- Advertisment -
Google search engine

Most Popular