Tuesday, December 3, 2024
HomeUncategorizedಕಾರ್ಕಳದ ಎಂಪಿಎಂ ಕಾಲೇಜಿನಲ್ಲಿ ಡಾ. ಕೆ . ಪಿ ರಾವ್‌ ಉಪನ್ಯಾಸ

ಕಾರ್ಕಳದ ಎಂಪಿಎಂ ಕಾಲೇಜಿನಲ್ಲಿ ಡಾ. ಕೆ . ಪಿ ರಾವ್‌ ಉಪನ್ಯಾಸ

.ಬಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್‌ ಕ್ಷೇತ್ರದ ಪಿತಾಮಹರೆಂದೆ ಪ್ರಸಿದ್ಧರಾದ ಹಾಗೂ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ʼನುಡಿʼ ಯ ಮೂಲ ವಿನ್ಯಾಸವನ್ನು ರೂಪಿಸಿದ ಸಾಧಕ ಡಾ ಕೆ.ಪಿ ರಾವ್‌ ಕಾರ್ಕಳದ ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದರು. ಕಾಲೇಜಿನ ಐಕ್ಯೂಎಸಿ ಹಾಗೂ ಕಂಪ್ಯೂಟರ್‌ ಅಪ್ಲಿಕೇಶನ್‌ ವಿಭಾಗದ ಸಹಭಾಗಿತ್ವದಲ್ಲಿ ಬಿಸಿಎ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಅಭಿವಿನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪಾಲ ಎಂಐಟಿಯ ನಿವೃತ್ತ ಪ್ರಾದ್ಯಾಪಕ ಡಾ ಕೆ. ಪಿ ರಾವ್‌ ಇವರು ಕೃತಕ ಬುದ್ಧಿಮತ್ತೆಯ ಆವಿಷ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಇದು ಕಾರ್ಯ ನಿರ್ವಹಿಸುವ ಬಗೆಯ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕಿರಣ್‌ ಎಂ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾಲೇಜಿನ ಗೃಂಥಪಾಲಕಾದ ಶ್ರೀ ವೆಂಕಟೇಶ್‌ ಅತಿಥಿಗಳನ್ನು ಸ್ವಾಗತಿಸಿದರು. ಐಕ್ಯೂಎಸಿ ಸಂಚಾಲಕಾದ ಶ್ರೀಮತಿ ಸುಷ್ಮಾ ರಾವ್‌ ಕೆ ಅತಿಥಿಗಳ ಜೀವನ ಸಾದನೆಗಳನ್ನು ಪರಿಚಯಿಸಿದರು. ಕಂಪ್ಯೂಟರ್‌ ಅಪ್ಲಿಕೇಶನ್‌ ವಿಭಾಗದ ಉಪನ್ಯಾಸಕಿ ನಿಖಿತಾ ಕಿಣಿ ವಂದಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ ಚಂದ್ರಾವತಿ ಹಾಗೂ ಉಪನ್ಯಾಸಕಿ ಪೂಜಾ ಉಪಸ್ಥಿತರಿದ್ದರು. ಬಿಸಿಎ ವಿದ್ಯಾರ್ಥಿನಿ ವಿಖ್ಯಾತ ಕಾರ್ಯಕ್ರಮ ನಿರೂಪಿಸಿದರು. ರಕ್ಷಿತ ಹಾಗೂ ತಂಡದವರು ಪ್ರಾರ್ಥಿಸಿದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular