Saturday, January 18, 2025
Homeಕಾರ್ಕಳಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಪುರಸಭೆಯ ನೋಟಿಸ್ ನೀಡಿರುವುದನ್ನು ಸಹಿಸಲು ಸಾಧ್ಯ ಇಲ್ಲ - ಕಾರ್ಕಳ...

ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಪುರಸಭೆಯ ನೋಟಿಸ್ ನೀಡಿರುವುದನ್ನು ಸಹಿಸಲು ಸಾಧ್ಯ ಇಲ್ಲ – ಕಾರ್ಕಳ ಟೈಗರ್ಸ್

ಕಾರ್ಕಳ : ಪಡುತಿರುಪತಿ ಎಂದೇ ಖ್ಯಾತಿ ಪಡೆದಿರುವ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಕಾರ್ಕಳ ಪುರಸಭಾ ಆಡಳಿತವು ಉತ್ಸವ ಸಂದರ್ಭಗಳಲ್ಲಿ ಗುರ್ಜಿಗಳನ್ನು ಅಳವಡಿಸಿ ತೆರವುಗೊಳಿಸುವ ಸಂದರ್ಭದಲ್ಲಿ ರಸ್ತೆ ಹಾಳುಗುತ್ತಿರುವ ಬಗ್ಗೆ ನೋಟಿಸ್ ನೀಡಿರುವ ಕ್ರಮವನ್ನು ಕಾರ್ಕಳ ಟೈಗರ್ಸ್ ಖಂಡಿಸಿದೆ.

ಈ ಬಗ್ಗೆ ಪುನರ್ ಪರಿಶೀಲನೇ ಮಾಡಿ ನೀಡಿದ ನೋಟೀಸ್ ತಕ್ಷಣ ಹಿಂಪಡೆಯಬೇಕು ಎಂದು ಕಾರ್ಕಳ ಟೈಗರ್ಸ್ ಇಂದು ಬೋಳ ಪ್ರಶಾಂತ್ ಕಾಮತ್ ನೇತೃತ್ವದಲ್ಲಿ ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪ ಟಿ ಶೆಟ್ಟಿಯವರಿಗೆ ಮನವಿ ಮಾಡಿದೆ.
ಉತ್ಸವ ಮುಗಿದ ನಂತರ ಗುಂಡಿಗಳನ್ನು ಮುಚ್ಚಿ ರಸ್ತೆ ಹಾಳಾಗದಂತೆ ದೇವಳದ ವತಿಯಿಂದಲೇ ವ್ಯವಸ್ಥೆ ಮಾಡುತ್ತಿದ್ದರೂ ಈ ರೀತಿ ನೋಟಿಸ್ ನೀಡಿರುವುದು ಖೇದಕರ ಕಾರ್ಕಳದ ವೆಂಕಟರಮಣ ದೇವರ ಉತ್ಸವ ನೂರಾರು ವರ್ಷಗಳಿಂದ ಕೂಡ ನಡೆದು ಕೊಂಡು ಬಂದಿದೆ. ಇಲ್ಲಿನ ರಥಬೀದಿಯಲ್ಲಿ ಗುರ್ಜಿ ನಿರ್ಮಾಣ ಮಾಡುವುದು ತಲ ತಲಾಂತರಗಳಿಂದ ನಡೆದು ಕೊಂಡು ಬಂದ ಪದ್ಧತಿ.

ಪ್ರತಿ ವರ್ಷ ಉತ್ಸವ ಆದ ಬಳಿಕ ಅಲ್ಲಿ ಹಾಕಿದ ಗುರ್ಜಿ ತೆಗೆದು ಗುರ್ಜಿಯ ಹೊಂಡ ಮುಚ್ಚುವ ಕೆಲಸ ಮಾಡಲಾಗುತ್ತದೆ. ಇದೆಲ್ಲ ತಿಳಿದು ಕೂಡ ಧಾರ್ಮಿಕ ವಿಚಾರದಲ್ಲಿ ಪುರಸಭೆ ಮಾಡಿರುವ ಕೃತ್ಯವನ್ನು ಸಹಿಸಿ ಕೊಳ್ಳಲು ಸಾಧ್ಯ ಇಲ್ಲ ಈ ಬಗ್ಗೆ ಪುರಸಭೆ ತಕ್ಷಣ ಸ್ಪಂದನೆ ಮಾಡದಿದ್ದರೆ ಹೋರಾಟ ಅನಿವಾರ್ಯವಾದೀತು
ಎಂದು ಅವರು ತಿಳಿಸಿದ್ದಾರೆ. ತಕ್ಷಣ ನೋಟಿಸ್ ಹಿಂಪಡೆಯುವಂತೆ ಅವರು ಪುರಸಭೆಗೆ ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular